ಬೀದರ್: ರಾಷ್ಟ್ರಮಟ್ಟದ `ಗುರುನಾನಕ್ ದೇವ್ ಹಾಕಿ ಟೂರ್ನಿ~ ನಗರದಲ್ಲಿ ಸೋಮವಾರ ಆರಂಭವಾಗಲಿದೆ.
ಗುರುನಾನಕರು ಬೀದರ್‌ಗೆ ಭೇಟಿ ನೀಡಿದ 500ನೇ ವರ್ಷಾಚರಣೆಯ ಅಂಗವಾಗಿ ಗುರುನಾನಕ್ ಝೀರಾ ಫೌಂಡೇಷನ್ ಈ ಟೂರ್ನಿ ಸಂಘಟಿಸಿದೆ.
ನಗರದ ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಸರ್ದಾರ್ ಜೋಗಾಸಿಂಗ್ ಮೆಮೋರಿಯಲ್ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದ್ದು, ದೇಶದ ವಿವಿಧೆಡೆಯ 12 ತಂಡಗಳು ಪಾಲ್ಗೊಳ್ಳಲಿವೆ. ಎಂ.ಇ.ಜಿ. ಬೆಂಗಳೂರು, ಎ.ಎಸ್.ಸಿ. ಬೆಂಗಳೂರು, ಎಚ್.ಎ.ಎಲ್. ಬೆಂಗಳೂರು, ಆರ್ಮಿ ಗ್ರೀನ್ ಬೆಂಗಳೂರು, ಪಂತ್ ರತನ್ ಜೋಗಾಸಿಂಗ್ ಅಕಾಡೆಮಿ ಬೀದರ್, ಪಿ.ಎಸ್.ಇ.ಬಿ. ಪಂಜಾಬ್, ಅಜಾದ್ ಕ್ಲಬ್ ಚಂಡೀಗಡ, ಬಿ.ಇ.ಜಿ. ಪುಣೆ, ಬಿ.ಎಸ್.ಎಫ್. ಜಲಂಧರ್, ಆರ್.ಸಿ.ಎಫ್ ಮುಂಬೈ, ಭೂಪಾಲ್ 11 ಹಾಗೂ ಎಂ.ಪಿ. 11 ತಂಡಗಳು ಇದರಲ್ಲಿ ಸೇರಿವೆ.
ವಿಜೇತ ತಂಡ 1 ಲಕ್ಷ ರೂಪಾಯಿ ಹಾಗೂ ರನ್ನರ್ ಅಪ್ ತಂಡ 50 ಸಾವಿರ ರೂಪಾಯಿ ನಗದು ಬಹುಮಾನ ಪಡೆಯಲಿವೆ. ಉದ್ಘಾಟನಾ ಸಮಾರಂಭದಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತ ಹಾಕಿ ಆಟಗಾರ ಎ.ಬಿ. ಸುಬ್ಬಯ್ಯ ಪಾಲ್ಗೊಳ್ಳಲಿದ್ದಾರೆ. ಟೂರ್ನಿ ಮಾರ್ಚ್ 30 ರವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.