ಬೆಂಗಳೂರು: ಇಂದಿರಾನಗರ ಕ್ಲಬ್ (ಐಬಿಬಿಸಿ), ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ಗುರುವಾರ ಆರಂಭವಾದ ಬಿ.ಎಸ್. ನಾರಾಯಣ ಸ್ಮಾರಕ ಟ್ರೋಫಿ ಸಬ್ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿತು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಐಬಿಬಿಸಿ 48-15ಪಾಯಿಂಟ್‌ಗಳಿಂದ ವಿ.ಎನ್.ಎಸ್. ಕ್ಲಬ್ ಎದುರು ಗೆಲುವು ಪಡೆಯಿತು. ಈ ತಂಡದ ಆದಿತ್ಯ 25 ಪಾಯಿಂಟ್ ಗಳಿಸಿ ಗಮನ ಸೆಳೆದರು.
ದಿನದ ಇನ್ನಿತರ ಪಂದ್ಯಗಳಲ್ಲಿ ಪಿಪಿಸಿ ಕ್ಲಬ್ 46-12ರಲ್ಲಿ ಹಾಸನದ ಓ ಮೇಘಾ ತಂಡದ ಮೇಲೂ, ಬೆಂಗಳೂರು ಸ್ಪೋರ್ಟಿಂಗ್ ತಂಡ 32-16ರಲ್ಲಿ ದಾವಣಗೆರೆಯ ಗ್ರೀನ್ಸ್ ಎದುರು ಗೆಲುವು ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.