ADVERTISEMENT

ಈಜಿಪ್ಟ್‌ ಜೂನಿಯರ್‌ ಟಿ.ಟಿ: ಸೆಲೆನಾಗೆ ಮೂರು ಚಿನ್ನ

ಪಿಟಿಐ
Published 16 ಅಕ್ಟೋಬರ್ 2017, 19:17 IST
Last Updated 16 ಅಕ್ಟೋಬರ್ 2017, 19:17 IST
ಈಜಿಪ್ಟ್‌ ಜೂನಿಯರ್‌ ಟಿ.ಟಿ: ಸೆಲೆನಾಗೆ ಮೂರು ಚಿನ್ನ
ಈಜಿಪ್ಟ್‌ ಜೂನಿಯರ್‌ ಟಿ.ಟಿ: ಸೆಲೆನಾಗೆ ಮೂರು ಚಿನ್ನ   

ಶರ್ಮ್‌ ಇಲ್‌ ಶೇಕ್‌, ಈಜಿ‍ಪ್ಟ್‌ (ಪಿಟಿಐ): ಅಪೂರ್ವ ಸಾಮರ್ಥ್ಯ ತೋರಿದ ಭಾರತದ ಸೆಲೆನಾ ಸೆಲ್ವಕುಮಾರ್‌, ಈಜಿಪ್ಟ್‌ ಜೂನಿಯರ್‌ ಮತ್ತು ಕೆಡೆಟ್‌ ಓಪನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದರು.

17 ವರ್ಷದ ಸೆಲೆನಾ ಅವರು ಬಾಲಕಿಯರ ಸಿಂಗಲ್ಸ್‌, ಡಬಲ್ಸ್‌ ಮತ್ತು ತಂಡ ವಿಭಾಗಗಳಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಸೋಮವಾರ ನಡೆದ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅಗ್ರಶ್ರೇಯಾಂಕಿತ ಆಟಗಾರ್ತಿ ಸೆಲೆನಾ 11–5, 12–10, 8–11, 6–11, 11–3, 6–11, 11–4ರಲ್ಲಿ ಎರಡನೇ ಶ್ರೇಯಾಂಕದ ಮರ್ವಾ ಅಲಹೋದಬಿ ವಿರುದ್ಧ ಗೆದ್ದರು.

ಇದಕ್ಕೂ ಮುನ್ನ ನಡೆದಿದ್ದ ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಸೆಲೆನಾ 11–9, 11–8, 10–12, 8–11, 11–8, 5–11, 11–5ರಲ್ಲಿ ಎಂಟನೇ ಶ್ರೇಯಾಂಕಿತ ಆಟಗಾರ್ತಿ ಮರಿಯಮ್‌ ಅಲಹೋದಬಿಯ ಸವಾಲು ಮೀರಿ ನಿಂತಿದ್ದರು.

ADVERTISEMENT

ಡಬಲ್ಸ್‌ ವಿಭಾಗದಲ್ಲಿ ನೈಜೀರಿಯಾದ ಎಸ್ಟರ್‌ ಒರಿಬಮೈಸ್‌ ಜೊತೆಗೂಡಿ ಆಡಿದ್ದ ಸೆಲೆನಾ ಫೈನಲ್‌ನಲ್ಲಿ 11–8, 12–10, 9–11, 8–11, 11–9ರಲ್ಲಿ ಈಜಿಪ್ಟ್‌ನ ಫರಿದಾ ಬದಾವಿ ಮತ್ತು  ಮಲಮಟೆನಿಯಾ ಪಾಪಡಿಮಿಟ್ರಿಯಸ್‌ ಅವರನ್ನು ಸೋಲಿಸಿದ್ದರು. ಸೆಮಿಫೈನಲ್‌ನಲ್ಲಿ ಸೆಲೆನಾ ಮತ್ತು ಎಸ್ಟರ್‌ 11–7, 4–11, 13–11, 9–11, 12–10ರಲ್ಲಿ ಈಜಿಪ್ಟ್‌ನ ಸಾರಾ ಅಬೌಸೆಟ್ಟಾ ಮತ್ತು ಟ್ಯುನೀಷಿಯಾದ ಅಬಿರ್‌ ಹಜ್‌ ಸಾರಾ ವಿರುದ್ಧ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.