ADVERTISEMENT

ಈಜು: ಮುಂದುವರಿದ ಆತಿಥೇಯರ ಪ್ರಾಬಲ್ಯ

ಪಿಟಿಐ
Published 6 ಏಪ್ರಿಲ್ 2018, 19:30 IST
Last Updated 6 ಏಪ್ರಿಲ್ 2018, 19:30 IST
ಈಜು: ಮುಂದುವರಿದ ಆತಿಥೇಯರ ಪ್ರಾಬಲ್ಯ
ಈಜು: ಮುಂದುವರಿದ ಆತಿಥೇಯರ ಪ್ರಾಬಲ್ಯ   

ಗೋಲ್ಡ್‌ ಕೋಸ್ಟ್‌ (ಎಎಫ್‌ಪಿ): ಕಾಮನ್‌ವೆಲ್ತ್‌ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಆತಿಥೇಯ ಆಸ್ಟ್ರೇಲಿಯಾದ ಪ್ರಾಬಲ್ಯ ಮುಂದುವರಿದಿದೆ.

ಎರಡನೇ ದಿನವಾದ ಶುಕ್ರವಾರ ಕಾಂಗರೂಗಳ ನಾಡಿನ ತಂಡ ಐದು ಚಿನ್ನ ಗೆದ್ದಿದೆ.

ಪುರುಷರ 400 ಮೀಟರ್ಸ್‌ ವೈಯ ಕ್ತಿಕ ಮೆಡ್ಲೆ ವಿಭಾಗದಲ್ಲಿ ಆಸ್ಟ್ರೇಲಿಯಾದ ಕ್ಲೈಡ್‌ ಲೆವಿಸ್‌ ಚಿನ್ನದ ಸಾಧನೆ ಮಾಡಿದರು.

ADVERTISEMENT

ಫೈನಲ್‌ನಲ್ಲಿ ಕ್ಲೈಡ್‌, 4 ನಿಮಿಷ 13. 12 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು.

ಸ್ಕಾಟ್ಲೆಂಡ್‌ನ ಮಾರ್ಕ್‌ ಜಾರನೆಕ್‌ (4:13.72ಸೆ.) ಮತ್ತು ನ್ಯೂಜಿಲೆಂಡ್‌ನ ಲೆವಿಸ್‌ ಕ್ಲಾರೆಬರ್ಟ್‌ (4:14.42ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.

ಪುರುಷರ 100 ಮೀಟರ್ಸ್‌ ಬ್ಯಾಕ್‌ ಸ್ಟ್ರೋಕ್‌ನಲ್ಲಿ ಆಸ್ಟ್ರೇಲಿಯಾದ ಮಿಚ್‌ ಲಾರ್ಕಿನ್‌ ಚಿನ್ನಕ್ಕೆ ಕೊರಳೊಡ್ಡಿದರು. ಅವರು ನಿಗದಿತ ದೂರ ಕ್ರಮಿಸಲು 53.18 ಸೆಕೆಂಡು ತೆಗೆದುಕೊಂಡರು.

ಆಸ್ಟ್ರೇಲಿಯಾದ ಬ್ರಾಡ್ಲಿ ವುಡ್‌ವರ್ಡ್‌ (53.95ಸೆ.) ಬೆಳ್ಳಿ ಜಯಿಸಿದರೆ, ಕೆನಡಾದ ಮಾರ್ಕಸ್‌ ಥೋರ್‌ಮೆಯರ್‌ (54.14ಸೆ.) ಕಂಚು ಪಡೆದರು.

ಪುರುಷರ 4X100 ಮೀಟರ್ಸ್‌ ಫ್ರೀಸ್ಟೈಲ್‌ ರಿಲೇ ಸ್ಪರ್ಧೆಯಲ್ಲಿ ಆಸ್ಟ್ರೇ ಲಿಯಾ ತಂಡ ಚಿನ್ನಕ್ಕೆ ಮುತ್ತಿಕ್ಕಿತು.

ಕ್ಯಾಮರಾನ್‌ ಮೆಕೆವೊಯ್‌, ಜೇಮ್ಸ್‌ ಮ್ಯಾಗ್ನಸೆನ್‌, ಜ್ಯಾಕ್‌ ಕಾರ್ಟ್‌ ರೈಟ್‌ ಮತ್ತು ಕೈಲ್‌ ಚಾಮರ್ಸ್‌ ಅವರಿದ್ದ ತಂಡ 3 ನಿಮಿಷ 12.96 ಸೆಕೆಂಡುಗಳಲ್ಲಿ ಗುರಿ ಸೇರಿತು.

ಇಂಗ್ಲೆಂಡ್‌ (3:15.25ಸೆ.) ಮತ್ತು ಸ್ಕಾಟ್ಲೆಂಡ್‌ (3:15.86ಸೆ.) ಕ್ರಮವಾಗಿ ಈ ವಿಭಾಗದ ಬೆಳ್ಳಿ ಮತ್ತು ಕಂಚು
ತಮ್ಮದಾಗಿಸಿಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.