ADVERTISEMENT

ಈಜು: ರೋಹಿತ್ ದಾಖಲೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಕೋಲ್ಕತ್ತ: ಬೆಂಗಳೂರು ವಿಶ್ವವಿದ್ಯಾಲಯದ ರೋಹಿತ್ ಆರ್. ಹವಾಲ್ದಾರ್ ಅವರು ಇಲ್ಲಿ ಆರಂಭವಾದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಈಜು ಚಾಂಪಿಯನ್‌ಷಿಪ್‌ನ 200ಮೀ. ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ದಾಖಲೆ ಸಮೇತ ಚಿನ್ನದ ಪದಕ ಜಯಿಸಿದರು.

ಸೋಮವಾರ ನಡೆದ ಸ್ಪರ್ಧೆಯಲ್ಲಿ ನಿಗದಿತ ಅಂತರವನ್ನು ಅವರು 2.08.93ಸಕೆಂಡ್‌ಗಳಲ್ಲಿ ಮುಟ್ಟಿದರು. ಈ ಮೊದಲು 2:09.50ಸೆ. ಗಳಲ್ಲಿ ಮುಟ್ಟಿದ ದಾಖಲೆ ಇತ್ತು. ಇದನ್ನು ರೋಹಿತ್ ಮುರಿದರು.

ಫಲಿತಾಂಶಗಳು ಇಂತಿವೆ: ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದವರು:  200ಮೀ. ಬ್ಯಾಕ್ ಸ್ಟ್ರೋಕ್: ರೋಹಿತ್ ಆರ್. ಹವಲ್ದಾರ್ (ಕಾಲ: 2.08.93ಸಕೆಂಡ್, ಬೆಂಗಳೂರು ವಿಶ್ವವಿದ್ಯಾಲಯ);  200ಮೀ. ಬ್ರೆಸ್ಟ್ ಸ್ಟ್ರೋಕ್: ಎ.ಪಿ. ಗಗನ್ (ಜೈನ್ ವಿ.ವಿ.); 50ಮೀ. ಬಟರ್ ಫ್ಲೈ: ಅರುಣ್ ಡಿಸೋಜಾ (ಕಾಲ: 26.37ಸ, ಬೆಂಗಳೂರು ವಿ.ವಿ.); 4ಷ100ಮೀ. ಮೆಡ್ಲ್ ರಿಲೇ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ.

ಮಹಿಳೆಯರ ವಿಭಾಗ: 200ಮೀ. ಬ್ರೆಸ್ಟ್ ಸ್ಟ್ರೋಕ್: ಪೂರ್ವ ಶೆಟ್ಟಿ (ಕಾಲ: 2:34.62ಸ, ಜೈನ್ ವಿ.ವಿ.), 50ಮೀ ಬಟರ್ ಫ್ಲೇ: ಪೂಜಾ ಆರ್. ಆಳ್ವಾ (ಕಾಲ: ವಿಟಿಯು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.