ನಾಗಪುರ: ಈ ಕ್ರಿಕೆಟ್ ಮತ್ತು ಸಿನೆಮಾ ಗದ್ದಲದಲ್ಲಿ ಕಬಡ್ಡಿ ಆಟಗಾರರು ಮಾತ್ರ ಅನಾಥರಾಗಿದ್ದಾರೆ. ನಾಗಪುರದಲ್ಲಿ ಗುರುವಾರ ರಾಷ್ಟ್ರೀಯ ಅಂತರ ಸಂಸ್ಥೆಗಳ ಕಬಡ್ಡಿ ಟೂರ್ನಿ ಆರಂಭವಾಯಿತು. ಬೆಂಗಳೂರಿನ ಎಸ್‌ಬಿಎಂ ಪರ ಆಡುವ ಅಂತರರಾಷ್ಟ್ರೀಯ ಆಟಗಾರರಾದ ಬಿ.ಸಿ. ರಮೇಶ್ ಮತ್ತು ಅವರ ಸೋದರ ಬಿ.ಸಿ. ಸುರೇಶ್ ಬುಧವಾರ ಸಂಜೆ ನಾಗಪುರಕ್ಕೆ ಬಂದರು.ಆದರೆ ಅವರಿಗೆ ವಸತಿ ಸಮಸ್ಯೆ ಎದುರಾಯಿತು.
ಕ್ರಿಕೆಟ್ ಪಂದ್ಯದಿಂದಾಗಿ ನಾಗಪುರದ ಎಲ್ಲ ಹೊಟೆಲ್‌ಗಳು ಫುಲ್ ಆಗಿವೆ. ಕಬಡ್ಡಿ ಆಟಗಾರರನ್ನು ಎಂಎಲ್‌ಎ ಹಾಸ್ಟೆಲ್‌ನಲ್ಲಿ ಇಳಿಸಲಾಯಿತು. ಆದರೆ ಅಲ್ಲಿ ವ್ಯವಸ್ಥೆ ಕೆಟ್ಟದಾಗಿತ್ತು. ರಮೇಶ್ ಅವರಿಗೆ ಕೊನೆಗೊಂದು ಹೊಟೆಲ್ ಸಿಕ್ಕಿತು.
ಕ್ರಿಕೆಟ್ ಮತ್ತು ಕಬಡ್ಡಿ ಆಟಗಾರರಿಗೆ ಹೋಲಿಕೆ ಮಾಡುವಂತೆಯೇ ಇಲ್ಲ. ಕ್ರಿಕೆಟ್ ಹಾಗೂ ಇತರ ಕ್ರೀಡಾಪಟುಗಳಿಗೆ ಸೌಕರ್ಯದ ವಿಷಯದಲ್ಲಿ ಇರುವ ತಾರತಮ್ಯಕ್ಕೆ ಇದೊಂದು ಉದಾಹರಣೆ ಅಷ್ಟೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.