ADVERTISEMENT

ಕರ್ನಾಟಕಕ್ಕೆ ವಿಜಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 18:30 IST
Last Updated 13 ಫೆಬ್ರುವರಿ 2011, 18:30 IST

ಮಲ್ಲಪುರಂ (ಕೇರಳ) ಪಿ.ಟಿ.ಐ.:  ರಾಬಿನ್ ಉತ್ತಪ್ಪ ಅವರ ಶತಕದ ನೆರವಿನಿಂದ ಕರ್ನಾಟಕ ತಂಡದವರು ವಿಜಯ್ ಹಜಾರೆ ಟ್ರೋಫಿ ದಕ್ಷಿಣ ವಲಯ ನಿಯಮಿತ ಓವರುಗಳ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಭಾನುವಾರ ಆಂಧ್ರಪ್ರದೇಶ ವಿರುದ್ಧ ಆರು ವಿಕೆಟ್ ಜಯ ಪಡೆದರು.

ಟಾಸ್ ಗೆದ್ದ ಕರ್ನಾಟಕ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆಂಧ್ರಪ್ರದೇಶ ತಂಡ 50 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 293 ರನ್ ಮಾಡಿತು.
ಇದಕ್ಕೆ ಉತ್ತರವಾಗಿ ಕರ್ನಾಟಕ 45.5 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು 295 ರನ್‌ಗಳಿಸಿ ವಿಜಯ ಸಾಧಿಸಿತು. ಶತಕಗಳಿಸಿದ ರಾಬಿನ್ ಉತ್ತಪ್ಪ (103) ತಮ್ಮ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಅವರ ಸ್ಕೋರಿನಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಇತ್ತು.

ಆಂಧ್ರಪ್ರದೇಶ: 50 ಓವರುಗಳಲ್ಲಿ 7 ವಿಕೆಟ್‌ಗೆ 293 (ವೈ. ವೇಣುಗೋಪಾಲ್ ರಾವ್ 75, ವಿ.ಎಂ. ಸಾಯಿ ಔಟಾಗದೆ 49, ಎ.ಜಿ. ಪ್ರದೀಪ್64, ಉದಿತ್ ಪಟೇಲ್ 50ಕ್ಕೆ2); ಕರ್ನಾಟಕ: 45.5 ಓವರುಗಳಲ್ಲಿ 4 ವಿಕೆಟ್‌ಗೆ 295 (ರಾಬಿನ್ ಉತ್ತಪ್ಪ 103, ಎಸ್.ಎನ್. ರಾಜು 73, ಎಂ.ಕೆ. ಪಾಂಡೆ 50, ಎಸ್.ಎಂ. ಬಾಶಾ 44ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.