ADVERTISEMENT

ಕರ್ನಾಟಕ ಜಯಭೇರಿ

ಪಿಟಿಐ
Published 20 ಮಾರ್ಚ್ 2018, 19:43 IST
Last Updated 20 ಮಾರ್ಚ್ 2018, 19:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಜಯಿಸಿತು. ಹಾಕಿ ಚಂಡೀಗಡ, ಪಂಜಾಬ್‌ ಅಂಡ್‌ ಸಿಂಧ್ ಬ್ಯಾಂಕ್, ಏರ್ ಇಂಡಿಯಾ ಮತ್ತು ರೈಲ್ವೆ ತಂಡಗಳು ಕೂಡ ಗೆಲುವು ಸಾಧಿಸಿವೆ.

‘ಎ’ ಡಿವಿಷನ್ ಟೂರ್ನಿಯ ಆರನೇ ದಿನವಾದ ಮಂಗಳವಾರ ನಡೆದ ’ಸಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವು 5–2 ಗೋಲುಗಳಿಂದ ಮುಂಬೈ ಹಾಕಿ ಸಂಸ್ಥೆ ತಂಡವನ್ನು ಮಣಿಸಿತು.

ಚುರುಕಿನಿಂದ ಆಡಿದ ಕರ್ನಾಟಕ ತಂಡದ ಆಟಗಾರರು ಆರಂಭದಿಂದಲೇ ಆಕ್ರಮಣಕಾರಿಯಾಗಿ ಎದುರಾಳಿ ತಂಡದ ಆತಂಕಕ್ಕೆ ಕಾರಣರಾದರು. ಮುಂಬೈ ಸಂಸ್ಥೆ ತಂಡ ಕೂಡ ಆಗಾಗ ಗೋಲು ಗಳಿಸುವ ಸೂಚನೆ ನೀಡಿತು.

ADVERTISEMENT

ದಿನದ ಮೊದಲ ಪಂದ್ಯದಲ್ಲಿ ಹಾಕಿ ಚಂಡೀಗಡ ತಂಡದವರು ಸಿಆರ್‌ಪಿಎಫ್‌ ತಂಡವನ್ನು ಏಕಪಕ್ಷೀಯವಾದ ಎರಡು ಗೋಲುಗಳಿಂದ ಮಣಿಸಿದರು. ಈ ಮೂಲಕ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಪಂಜಾಬ್‌ ಅಂಡ್ ಸಿಂಧ್ ಬ್ಯಾಂಕ್‌ ತಂಡ ಹಾಕಿ ಜಾರ್ಖಂಡ್‌ ವಿರುದ್ಧ 4–0ಯಿಂದ ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

ಹಾಕಿ ಹರಿಯಾಣವನ್ನು ಏರ್‌ ಇಂಡಿಯಾ ತಂಡ 3–1ರಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದರೆ ‘ಸಿ’ ಗುಂಪಿನ ಪಂದ್ಯದಲ್ಲಿ ಹಾಕಿ ಪಂಜಾಬ್‌ ಮತ್ತು ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್‌ ತಂಡಗಳ ನಡುವಿನ ಪಂದ್ಯ 2–2ರಿಂದ ಡ್ರಾಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.