ADVERTISEMENT

ಕಲ್ಲೇಶಪ್ಪ, ಅನಿತಾಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 20:28 IST
Last Updated 11 ಅಕ್ಟೋಬರ್ 2017, 20:28 IST
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಬುಧವಾರ ನಡೆದ 53ನೇ ಅಂತರ ಕಾಲೇಜು ಅಥ್ಲೆಟಿಕ್ಸ ಚಾಂಪಿಯನ್ ಷಿಪ್ ನ ಹ್ಯಾಮರ್ ಥ್ರೂ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ರಾಜಾಜಿನಗರದ ಜಿಎಫ್ ಜಿಸಿ ಕಾಲೇಜಿನ ಗಣೇಶ್.ವಿ. –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್

ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಎಮ್‌.ಜಿ ಕಲ್ಲೇಶಪ್ಪ, ಎನ್‌.ಎಲ್‌ ಅನಿತಾ ಬೆಂಗಳೂರು ವಿಶ್ವವಿದ್ಯಾಲಯದ 53ನೇ ಅಂತರ ಕಾಲೇಜು ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪುರುಷರ 10,000 ಮೀಟರ್ಸ್‌ ವಿಭಾಗದಲ್ಲಿ ಕೆ.ವಿ ಕಾಲೇಜು ಸ್ಪರ್ಧಿ ಕಲ್ಲೇಶಪ್ಪ 36:45.4 ನಿಮಿಷಗಳಲ್ಲಿ ಗುರಿ ಸೇರುವ ಮೂಲಕ ಮೊದಲಿಗರಾದರು. ಮಹಿಳೆಯರ ವಿಭಾಗದಲ್ಲಿ ಶ್ರೀನಿವಾಸಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಪರ್ಧಿ ಅನಿತಾ (48:17.3) ಚಿನ್ನಕ್ಕೆ ಕೊರಳೊಡ್ಡಿದರು.

ಚಿನ್ನ ಗೆದ್ದವರು: ಪುರುಷರ ವಿಭಾಗ: 110ಮೀ ಹರ್ಡಲ್ಸ್‌: ಎಮ್‌.ರಾಜೇಶ್‌ (ಕೆ.ವಿ ಕಾಲೇಜು; ಕಾಲ: 18.7)–1, ಜಾವಲಿನ್ ಥ್ರೋ: ಪವನ್‌ ಯಾದವ್‌ (ವಿಜಯಾ ಕಾಲೇಜು: 47.38ಮೀ). ಲಾಂಗ್ ಜಂಪ್‌: ಪಿ.ಕೆ ತೇಜಸ್ವಿನಿ (ಯುವಿಸಿಇ; 4.96ಮೀ). 100ಮೀ ಹರ್ಡಲ್ಸ್‌: ಪಿ.ಕೆ ತೇಜಸ್ವಿನಿ (ಯುವಿಸಿಇ; 17.5 ಸೆಕೆಂಡ್‌)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.