ಮೊಹಾಲಿ (ಪಿಟಿಐ): ಡಿಮಿಟ್ರಿ ಮಸ್ಕರೇನಸ್ (25ಕ್ಕೆ5) ಪ್ರಭಾವಿ ಬೌಲಿಂಗ್ ಮತ್ತು ಶಾನ್ ಮಾರ್ಷ್ (ಅಜೇಯ 64, 54 ಎ, 7 ಬೌಂ, 1 ಸಿ) ಉತ್ತಮ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್‌ನ ಐದನೇ ಅವತರಣಿಕೆಯ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಿತು.
ಪಿಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆ್ಯಡಮ್ ಗಿಲ್‌ಕ್ರಿಸ್ಟ್ ಬಳಗ 7 ವಿಕೆಟ್‌ಗಳಿಂದ ಪುಣೆ ವಾರಿಯರ್ಸ್ ತಂಡವನ್ನು ಮಣಿಸಿತು.ಮೊದಲು ಬ್ಯಾಟ್ ಮಾಡಿದ ಸೌರವ್ ಗಂಗೂಲಿ ಬಳಗ ಮಸ್ಕರೇನಸ್ ದಾಳಿಗೆ ನಲುಗಿ 19 ಓವರ್‌ಗಳಲ್ಲಿ 115 ರನ್‌ಗಳಿಗೆ ಆಲೌಟಾಯಿತು. ಸುಲಭ ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಇನ್ನೂ 14 ಎಸೆತಗಳು ಬಾಕಿಯುಳಿದಿರುವಂತೆಯೇ 3 ವಿಕೆಟ್‌ಗೆ 116 ರನ್ ಗಳಿಸಿ ಜಯ ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.