ADVERTISEMENT

ಕಿವೀಸ್‌ಗೆ ಸರಣಿ ಜಯದ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2013, 19:30 IST
Last Updated 22 ಡಿಸೆಂಬರ್ 2013, 19:30 IST

ಹ್ಯಾಮಿಲ್ಟನ್‌ (ಐಎಎನ್‌ಎಸ್‌): ವೆಸ್ಟ್‌ ಇಂಡೀಸ್‌ ಎದುರಿನ ಟೆಸ್ಟ್‌್ ಕ್ರಿಕೆಟ್‌ ಪಂದ್ಯದಲ್ಲಿ ಗೆಲುವಿಗೆ ಸುಲಭ ಗುರಿ ಪಡೆದಿದ್ದ ನ್ಯೂಜಿಲೆಂಡ್‌ ತಂಡ  ಎಂಟು ವಿಕೆಟ್‌ಗಳು ಬಾಕಿ ಇರುವಂತೆ ಜಯ ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 2–0ರಲ್ಲಿ ಮುನ್ನಡೆ ತನ್ನದಾಗಿಸಿಕೊಂಡಿತು.

ಸೆಡಾನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಕಿವೀಸ್‌ ಗೆಲುವಿಗೆ ನಾಲ್ಕನೇ ದಿನ 116 ರನ್‌ ಅಗತ್ಯವಿತ್ತು. ಹಮೀಷ್‌ ರುದರ್‌ಫರ್ಡ್‌ (ಅಜೇಯ 48, 117ಎಸೆತ, 6 ಬೌಂಡರಿ, 1 ಸಿಕ್ಸರ್‌)  ಮತ್ತು ಕೇನ್‌ ವಿಲಿಯಮ್ಸನ್‌ (ಅಜೇಯ 56, 83ಎಸೆತ, 9 ಬೌಂಡರಿ) ಉತ್ತಮ ಆಟದ ಮೂಲಕ ಗೆಲುವು ತಂದುಕೊಟ್ಟರು. ಕಿವೀಸ್‌ 2006ರಲ್ಲಿಯೂ ವಿಂಡೀಸ್‌ ಎದುರು ಸರಣಿ ಜಯ ಸಾಧಿಸಿತ್ತು.

ಸಂಕ್ಷಿಪ್ತ ಸ್ಕೋರು: ವೆಸ್ಟ್‌ ಇಂಡೀಸ್‌ ಮೊದಲ ಇನಿಂಗ್ಸ್‌್ 116.2 ಓವರ್‌ಗಳಲ್ಲಿ 367 ಹಾಗೂ ಎರಡನೇ ಇನಿಂಗ್ಸ್‌ 103. ನ್ಯೂಜಿಲೆಂಡ್‌ ಪ್ರಥಮ ಇನಿಂಗ್ಸ್‌ 117.3 ಓವರ್‌ಗಳಲ್ಲಿ 349 ಹಾಗೂ ಎರಡನೇ ಇನಿಂಗ್ಸ್‌ 40.4 ಓವರ್‌ಗಳಲ್ಲಿ 2 ವಿಕೆಟ್‌ಗೆ 124 (ಹಮೀಷ್‌ ರುದರ್‌ಫರ್ಡ್‌ ಔಟಾಗದೆ 48, ಕೇನ್‌ ವಿಲಿಯಮ್ಸನ್‌ ಔಟಾಗದೆ 56; ಡರೆನ್‌ ಸಮಿ 21ಕ್ಕೆ1). ಫಲಿತಾಂಶ: ನ್ಯೂಜಿಲೆಂಡ್‌ಗೆ 8 ವಿಕೆಟ್‌ ಜಯ ಹಾಗೂ ಮೂರು ಪಂದ್ಯಗಳ ಸರಣಿಯಲ್ಲಿ 2–0ರಲ್ಲಿ ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.