ಬಾಗಲಕೋಟೆ: ನಗರದಲ್ಲಿ ಭಾನುವಾರ ನಡೆದ ಕಿವುಡರ ರಾಜ್ಯ ಮಟ್ಟದ 10ನೇ ಚೆಸ್ ಟೂರ್ನಿಯಲ್ಲಿ ಅಸೋಸಿಯೇಶನ್ ಆಫ್ ಡೆಫ್ ಬೆಂಗಳೂರು (ಎಡಿಬಿ) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಎಡಿಬಿ 24.5 ಪಾಯಿಂಟ್ ಪಡೆದರೆ ಆತಿಥೇಯ ಬಾಗಲಕೋಟೆ ಜಿಲ್ಲಾ ಕಿವುಡರ ಸಂಘ 23.5 ಪಾಯಿಂಟ್ ಪಡೆದು ದ್ವಿತೀಯ ಮತ್ತು ಬೆಂಗಳೂರಿನ ಕರ್ನಾಟಕ ಸ್ಪೋರ್ಟ್ಸ್ ಫೆಡರೇಷನ್ ಆಫ್ ಡೆಫ್ (ಕೆಎಸ್ಎಫ್ ಡಿ) ತಂಡ 23 ಪಾಯಿಂಟ್ ಗಳಿಸಿ ತೃತೀಯ ಸ್ಥಾನಕ್ಕೆ ಗಳಿಸಿತು.
ಕೆಎಸ್ಎಫ್‌ಡಿಯ ಆದೀಶ್ ಎಸ್. ವೈಯಕ್ತಿಕ ಚಾಂಪಿಯನ್ ಆದರು. ಮಹಿಳೆಯರ ವಿಭಾಗದಲ್ಲಿ ಬೆಳಗಾ ವಿಯ ಪೂನಂ ಚಂಡಕ್ ಪ್ರಥಮ ಸ್ಥಾನ ಗಳಿಸಿದರು. ವಿಜೇತರಾದವರು ಕೋಲ್ಕತ್ತಾ ದಲ್ಲಿ ಆಗಸ್ಟ್‌ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಟೂರ್ನಿ ಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಆರ್.ಸಿ.ಸತ್ಯನ್ ತಿಳಿಸಿದರು.
ಫಲಿತಾಂಶಗಳು: ಪುರುಷರ ವಿಭಾಗ: ಆದೀಶ್ ಎಸ್.(ಕೆಎಸ್ಎಫ್ ಡಿ )-1, ಪಳನಿ ಜಿ (ಬೆಂಗಳೂರು)–2, ಶಶಿಧರ ಕೆ.ಎಂ (ಕೆಎಸ್ಎಫ್‌ಡಿ)–3. ಮಹಿಳೆಯರ ವಿಭಾಗ: ಪೂನಂ ಚಂಡಕ್ (ಬೆಳಗಾವಿ)–1, ಸೌಮ್ಯ ಕಲ್ಯಾಣಿ (ಬಾಗಲಕೋಟೆ)–2, ನಜಮೀನ್ ಕೌಜಲಗಿ (ಬೆಳಗಾವಿ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.