ADVERTISEMENT

ಕುಸ್ತಿ: ಭಾರತಕ್ಕೆ ಮೊದಲ ಚಿನ್ನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 20:00 IST
Last Updated 15 ಜೂನ್ 2013, 20:00 IST

ನವದೆಹಲಿ (ಪಿಟಿಐ): ಭಾರತದ ಮಂಗಲ್ ಕಡ್ಯನ್, ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಸಾಧನೆ ಮಾಡಿದ್ದಾರೆ.

ಕುಸ್ತಿಯ ಇತರ ವಿಭಾಗಗಳಲ್ಲಿ ಭಾರತ, ಶನಿವಾರ ಎರಡು ಬೆಳ್ಳಿ ಹಾಗೂ ಒಂದು ಕಂಚು ಗೆದ್ದುಕೊಂಡಿದೆ.

50 ಕೆ.ಜಿ  ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಮಂಗಲ್ ಇರಾನಿನ ಮುಸ್ತಫಾ ಯಗೌಬಿಜೆಲೆಟಿ ವಿರುದ್ಧ 8-0 ರಲ್ಲಿ ಗೆದ್ದು ಬಂಗಾರ ಬಾಚಿದರು. 120 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸುರ್ಜಿತ್ 10-2ರಲ್ಲಿ ಚೀನಾದ ಕ್ಸಿನ್‌ಮೆನ್ ಡು ಅವರನ್ನು ಮಣಿಸಿ, ಕಂಚು ಪಡೆದರು.

ಮಹಿಳಾ ವಿಭಾಗದ 48 ಕೆ.ಜಿ ಹಾಗೂ 72 ಕೆ.ಜಿ ವಿಭಾಗದ ಫೈನಲ್‌ಗಳಲ್ಲಿ ಕ್ರಮವಾಗಿ ಮಮತಾ ರಾಣಿ ಹಾಗೂ ಮನಿಷಾ ಮಹಾದೇವ್ ದಿವೆಕರ್ ಸೋತು ಬೆಳ್ಳಿಗೆ ತೃಪ್ತಿ ಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.