ಕೋಲ್ಕತ್ತ (ಪಿಟಿಐ): ಆರ್.ಪಿ. ಸಿಂಗ್ ಹಾಗೂ ರವೀಂದ್ರ ಜಡೇಜ ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ಕೊಚ್ಚಿ ಟಸ್ಕರ್ಸ್ ಕೇರಳ ತಂಡದವರು ಐಪಿಎಲ್ ಟ್ವೆಂಟಿ-20 ಟೂರ್ನಿಯ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಎದುರು ಆರು ರನ್‌ಗಳ ರೋಚಕ ಗೆಲುವು ಪಡೆದರು.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮಾಹೇಲ ಜಯವರ್ಧನೆ ನೇತೃತ್ವದ ಕೊಚ್ಚಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 132 ರನ್ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಗೌತಮ್ ಗಂಭೀರ್ ನೇತೃತ್ವದ ಕೋಲ್ಕತ್ತ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಲು ಮಾತ್ರ ಶಕ್ತವಾಯಿತು.
126 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕೋಲ್ಕತ್ತ ಆರಂಭಿಕ ಆಘಾತ ಅನುಭವಿಸಿತು. ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯಲು ಮನೋಜ್ ತಿವಾರಿ ನಡೆಸಿದ ಹೋರಾಟ (46, 51ಎಸೆತ, 2 ಬೌಂ, 2ಸಿಕ್ಸರ್) ವ್ಯರ್ಥವಾಯಿತು. ಆರ್.ಪಿ. ಸಿಂಗ್ ಹಾಗೂ ರವೀಂದ್ರ ಜಡೇಜ ತಲಾ ಎರಡು ವಿಕೆಟ್ ಪಡೆದು ಪ್ರಭಾವಿ ಎನಿಸಿದರೆ, ಮಾಹೇಲ ಜಯವರ್ಧನೆ ‘ಪಂದ್ಯ ಶ್ರೇಷ್ಠ’ ಗೌರವಕ್ಕೆ ಪಾತ್ರರಾದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕೊಚ್ಚಿ ತಂಡಕ್ಕೆ ಅಬ್ಬರದ ಆರಂಭ ಲಭಿಸಿತ್ತು. ಬ್ರೆಂಡನ್ ಮೆಕ್ಲಮ್ (23, 19 ಎಸೆತ, 2ಬೌಂ, 1 ಸಿಕ್ಸರ್) ಮತ್ತು ಮಾಹೇಲ ಜಯವರ್ಧನೆ (25, 27 ಎಸೆತ, 5 ಬೌಂ) ಮೊದಲ ವಿಕೆಟ್‌ಗೆ 7 ಓವರ್‌ಗಳಲ್ಲಿ 49 ರನ್ ಕಲೆಹಾಕಿದರು.
ಆದರೆ ಮೆಕ್ಲಮ್ ವಿಕೆಟ್ ಪಡೆದ ಶಕೀಬ್ ಕೋಲ್ಕತ್ತ ತಂಡಕ್ಕೆ ‘ಬ್ರೇಕ್’ ನೀಡಿದರು. ಬಳಿಕ ಯೂಸುಫ್ ಅವರು ತಮ್ಮ ಮೊದಲ ಮೂರು ಓವರ್‌ಗಳಲ್ಲಿ ಕ್ರಮವಾಗಿ ಜಯವರ್ಧನೆ, ಪಾರ್ಥಿವ್ ಪಟೇಲ್ ಹಾಗೂ ಬ್ರಾಡ್ ಹಾಡ್ಜ್ ಅವರನ್ನು ಪೆವಿಲಿಯನ್‌ಗಟ್ಟಿದರು.ರವೀಂದ್ರ ಜಡೇಜ (29, 18 ಎಸೆತ, 1 ಬೌಂ, 3 ಸಿಕ್ಸರ್) ಅವರು ತಂಡದ ‘ಟಾಪ್ ಸ್ಕೋರರ್’ ಎನಿಸಿದರು. ಬಳಿಕ ಅವರು ಬೌಲಿಂಗ್‌ನಲ್ಲೂ ಮಿಂಚಿ ಆಲ್‌ರೌಂಡ್ ಪ್ರದರ್ಶನ ನೀಡಿದರು.
ಸ್ಕೋರು ವಿವರ
ಕೊಚ್ಚಿ ಟಸ್ಕರ್ಸ್ ಕೇರಳ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 132
ಬ್ರೆಂಡನ್ ಮೆಕ್ಲಮ್ ಸಿ ಮಾರ್ಗನ್ ಬಿ ಶಕೀಬ್ ಅಲ್ ಹಸನ್ 23
ಮಾಹೇಲ ಜಯರ್ಧನೆ ಎಲ್‌ಬಿಡಬ್ಲ್ಯು ಬಿ ಯೂಸುಫ್ ಪಠಾಣ್ 25
ಪಾರ್ಥಿವ್ ಪಟೇಲ್ ಎಲ್‌ಬಿಡಬ್ಲ್ಯು ಬಿ ಯೂಸುಫ್ ಪಠಾಣ್ 09
ಬ್ರಾಡ್ ಹಾಡ್ಜ್ ಬಿ ಯೂಸುಫ್ ಪಠಾಣ್ 02
ರವೀಂದ್ರ ಜಡೇಜ ಸಿ ಪಠಾಣ್ ಬಿ ಬ್ರೆಟ್ ಲೀ 29
ಕೇದಾರ್ ಜಾದವ್ ಬಿ ಶಕೀಬ್ ಅಲ್ ಹಸನ್ 12
ರೈಫಿ ಗೊಮೆಜ್ ಔಟಾಗದೆ 10
ಆರ್. ವಿನಯ್ ಕುಮಾರ್ ಬಿ ಶಕೀಬ್ ಅಲ್ ಹಸನ್ 11
ರಮೇಶ್ ಪೊವಾರ್ ಔಟಾಗದೆ 03
ಇತರೆ: (ಬೈ-1, ಲೆಗ್‌ಬೈ-4, ವೈಡ್-3) 08
ವಿಕೆಟ್ ಪತನ: 1-49 (ಮೆಕ್ಲಮ್; 6.6), 2-51 (ಜಯವರ್ಧನೆ; 7.6), 3-55 (ಹಾಡ್ಜ್; 9.5), 4-65 (ಪಟೇಲ್; 11.5), 5-100 (ಜಾದವ್; 14.6), 6-105 (ಜಡೇಜ; 15.4), 7-127 (ವಿನಯ್ ಕುಮಾರ್)
ಬೌಲಿಂಗ್: ಬ್ರೆಟ್ ಲೀ 4-0-33-1, ಲಕ್ಷ್ಮೀಪತಿ ಬಾಲಾಜಿ 4-0-23-0, ಇಕ್ಬಾಲ್ ಅಬ್ದುಲ್ಲಾ 4-0-23-0, ಶಕೀಬ್ ಅಲ್ ಹಸನ್ 4-0-28-3, ಯೂಸುಫ್ ಪಠಾಣ್ 4-1-20-3
ಕೋಲ್ಕತ್ತ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 126
ಮನ್ವಿಂದರ್ ಬಿಸ್ಲಾ ಬಿ ಜಡೇಜ 16
ಜಾಕ್ ಕಾಲಿಸ್ ಸಿ ಜಾಧವ್ ಬಿ ವಿನಯ್ ಕುಮಾರ್ 06
ಗೌತಮ್ ಗಂಭೀರ್ ಬಿ ಆರ್‌ಪಿ ಸಿಂಗ್ 03
ಮನೋಜ್ ತಿವಾರಿ ಸ್ಟಂಪ್ಡ್ ಪಟೇಲ್ ಬಿ ಜಡೇಜ 46
ಎಯೊನ್ ಮಾರ್ಗನ್ ರನ್‌ಔಟ್ (ಜಯವರ್ಧನೆ) 10
ಶಕೀಬ್ ಅಲ್ ಹಸನ್ ಬಿ ಆರ್‌ಪಿ ಸಿಂಗ್ 02
ಯೂಸುಫ್ ಪಠಾಣ್ ಸಿ ಮುರಳೀಧರನ್ ಬಿ ಪೊವಾರ್ 08
ರಜತ್ ಭಾಟಿಯಾ ರನ್‌ಔಟ್ (ಜಡೇಜ) 10
ಬ್ರೆಟ್ ಲೀ ಸಿ ಕೇದಾರ್ ಜಾದವ್ ಬಿ ಮುರಳೀಧರನ್ 01
ಇಕ್ಬಾಲ್ ಅಬ್ದುಲ್ಲಾ ಔಟಾಗದೆ 12
ಲಕ್ಷ್ಮೀಪತಿ ಬಾಲಾಜಿ ಔಟಾಗದೆ 01
ಇತರೆ: ಬೈ-4, ಲೆಗ್ ಬೈ-4, ವೈಡ್-3 11
ವಿಕೆಟ್ ಪತನ: 1-24 (ಕಾಲಿಸ್), 2-27(ಗಂಭೀರ್), 3-37 (ಬಿಸ್ಲಾ), 4-73 (ಮಾರ್ಗನ್), 5-86 (ಹಸನ್), 6-97 (ಪಠಾಣ್), 7-101 (ತಿವಾರಿ), 8-105 (ಬ್ರೆಟ್ ಲೀ), 9-125 (ಭಾಟಿಯಾ)
ಬೌಲಿಂಗ್: ಆರ್.ಪಿ. ಸಿಂಗ್ 4-0-25-2, ಆರ್. ವಿನಯ್ ಕುಮಾರ್ 4-0-21-1, ರವೀಂದ್ರ ಜಡೇಜ 4-0-25-2, ರಮೇಶ್ ಪೊವಾರ್ 4-0-29-1, ಮುರಳೀಧರನ್ 4-0-18-1.
ಕೊಚ್ಚಿ ಟಸ್ಕರ್ಸ್ ಕೇರಳಕ್ಕೆ 6 ರನ್ ಗೆಲುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.