ADVERTISEMENT

ಕೊಡವ ಹಾಕಿ: ಪ್ರೀ ಕ್ವಾರ್ಟರ್‌ಗೆ ಪರದಂಡ, ಬೊವ್ವೇರಿಯಂಡ

​ಪ್ರಜಾವಾಣಿ ವಾರ್ತೆ
Published 15 ಮೇ 2018, 19:30 IST
Last Updated 15 ಮೇ 2018, 19:30 IST

ನಾಪೋಕ್ಲು: ಇಲ್ಲಿನ ಜನರಲ್‌ ಕೆ.ಎಸ್‌. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ‘ಕುಲ್ಲೇಟಿರ ಹಾಕಿ ಉತ್ಸವ’ದಲ್ಲಿ ಪರದಂಡ, ಬೊವ್ವೇರಿಯಂಡ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟವು.

ಮಂಗಳವಾರ ನಡೆದ ಪಂದ್ಯದಲ್ಲಿ ಪರದಂಡ ತಂಡವು ಕೊಂಗೇಟಿರ ತಂಡವನ್ನು 2– 0 ಗೋಲುಗಳಿಂದ ಸೋಲಿಸಿತು. ಪರದಂಡದ ಪರ ಮುತ್ತಣ್ಣ, ಕೀರ್ತನ್ ಒಂದೊಂದು ಗೋಲು ಗಳಿಸಿದರು.

ಬೊವ್ವೇರಿಯಂಡ ತಂಡವು ನೆಲ್ಲಮಕ್ಕಡ ತಂಡವನ್ನು 3–2ರಲ್ಲಿ ಸೋಲಿಸಿತು. ಅಂಜಪರುವಂಡ ತಂಡವು ಚೆಕ್ಕೇರ ತಂಡವನ್ನು ಸೋಲಿಸಿತು. ಮಂಡೇಪಂಡ ತಂಡವು ಚೆಪ್ಪುಡಿರ ತಂಡವನ್ನು 3–1ರಲ್ಲಿ ಸೋಲಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.