ADVERTISEMENT

ಕೊನೆ ಸ್ಥಾನದಲ್ಲಿ ಉಳಿದ ರವಿಕುಮಾರ್‌

ಪಿಟಿಐ
Published 25 ಅಕ್ಟೋಬರ್ 2017, 19:47 IST
Last Updated 25 ಅಕ್ಟೋಬರ್ 2017, 19:47 IST

ನವದೆಹಲಿ: ಭಾರತದ ಭರವಸೆಯಾಗಿದ್ದ ರವಿಕುಮಾರ್‌ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನ 10 ಮೀಟರ್ಸ್ ಏರ್‌ ರೈಫಲ್‌ ವಿಭಾಗದಲ್ಲಿ ಕೊನೆಯ ಸ್ಥಾನದಲ್ಲಿ ಉಳಿದರು. ಹೀಗಾಗಿ ಸ್ಪರ್ಧೆಯ ಎರಡನೇ ದಿನ ಆತಿಥೇಯರ ಪದಕದ ಕನಸು ನನಸಾಗಲಿಲ್ಲ. ಚೊಚ್ಚಲ ವಿಶ್ವಕಪ್ ಫೈನಲ್‌ನಲ್ಲಿ ಸ್ಪರ್ಧಿಸಿದ ಅವರು ಎಂಟನೇ ಸ್ಥಾನ ಗಳಿಸಿ ನಿರಾಸೆ ಅನುಭವಿಸಿದರು. ಅರ್ಹತಾ ಸುತ್ತಿನಲ್ಲಿ ಐದನೇ ಸ್ಥಾನದಲ್ಲಿದ್ದ ರವಿ ಕುಮಾರ್‌ ಅವರಿಗೆ ಫೈನಲ್‌ನಲ್ಲಿ 123.4 ಪಾಯಿಂಟ್‌ ಗಳಿಸಲಷ್ಟೇ ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.