ADVERTISEMENT

ಕ್ರಿಕೆಟ್: ಕರ್ನಾಟಕಕ್ಕೆ ಮೇಲುಗೈ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 19:30 IST
Last Updated 11 ನವೆಂಬರ್ 2012, 19:30 IST

ಬೆಂಗಳೂರು: ಕರ್ನಾಟಕ `ಎ~ ತಂಡ ಇಲ್ಲಿ ನಡೆಯುತ್ತಿರುವ ಸಿ.ಕೆ. ನಾಯ್ಡು ಟ್ರೋಫಿ ಎಲೈಟ್ ಎ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಹಿಮಾಚಲ ಪ್ರದೇಶ `ಎ~ ವಿರುದ್ಧ ಮೇಲುಗೈ ಸಾಧಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 476 ರನ್‌ಗಳಿಗೆ ಆಲೌಟಾಯಿತು. ದಿನದಾಟದ ಅಂತ್ಯಕ್ಕೆ ಹಿಮಾಚಲ ಪ್ರದೇಶ ತಂಡ ತನ್ನ ಎರಡನೇ ಇನಿಂಗ್ಸ್‌ನಲ್ಲಿ 54 ಓವರ್‌ಗಳಲ್ಲಿ 6 ವಿಕೆಟ್‌ಗೆ 214 ರನ್ ಗಳಿಸಿತ್ತು. ಸೋಮವಾರ ಪಂದ್ಯದ ಅಂತಿಮ ದಿನವಾಗಿದ್ದು, ಹಿಮಾಚಲ ಪ್ರದೇಶ ಇದೀಗ ಕೇವಲ 34 ರನ್‌ಗಳ ಮುನ್ನಡೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್:
ಹಿಮಾಚಲ ಪ್ರದೇಶ `ಎ~: ಮೊದಲ ಇನಿಂಗ್ಸ್ 296 ಮತ್ತು ಎರಡನೇ ಇನಿಂಗ್ಸ್ 54 ಓವರ್‌ಗಳಲ್ಲಿ 6 ವಿಕೆಟ್‌ಗೆ 214 (ಎಲ್.ಎಸ್. ಶಾಂಡಿಲ್ 30, ಜೆ.ಪಿ. ಸಿಂಗ್ 32, ಎನ್.ಆರ್. ಗ್ಯಾಂಗ್ಟ 48, ಕೆ.ಜೆ. ಸಿಂಗ್ ಬ್ಯಾಟಿಂಗ್ 45). ಕರ್ನಾಟಕ: ಮೊದಲ ಇನಿಂಗ್ಸ್ 119 ಓವರ್‌ಗಳಲ್ಲಿ 476 (ಕರುಣ್ ನಾಯರ್ 156, ಶ್ರೇಯಸ್ ಗೋಪಾಲ್ 59, ಕೆ. ಗೌತಮ್ 53)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.