ADVERTISEMENT

ಕ್ರಿಕೆಟ್: ಗೇಲ್ ಆರ್ಭಟ; ವಿಂಡೀಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 19:30 IST
Last Updated 1 ಜುಲೈ 2012, 19:30 IST
ಕ್ರಿಕೆಟ್: ಗೇಲ್ ಆರ್ಭಟ; ವಿಂಡೀಸ್‌ಗೆ ಜಯ
ಕ್ರಿಕೆಟ್: ಗೇಲ್ ಆರ್ಭಟ; ವಿಂಡೀಸ್‌ಗೆ ಜಯ   

ಫ್ಲೋರಿಡಾ (ಎಪಿ): ಕ್ರಿಸ್ ಗೇಲ್ (52 ಎಸೆತಗಳಲ್ಲಿ 85) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ವೆಸ್ಟ್‌ಇಂಡೀಸ್ ತಂಡದವರು ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 56 ರನ್‌ಗಳ ಗೆಲುವು ಸಾಧಿಸಿದ್ದಾರೆ.

ತಟಸ್ಥ ಸ್ಥಳದಲ್ಲಿ ನಡೆಯುತ್ತಿರುವ ಸರಣಿಯ ಈ ಪಂದ್ಯದಲ್ಲಿ ವಿಂಡೀಸ್ ನೀಡಿದ 210 ರನ್‌ಗಳ ಸವಾಲಿನ ಗುರಿಗೆ ಉತ್ತರವಾಗಿ ಕಿವೀಸ್ ಬಳಗ 18.3 ಓವರ್‌ಗಳಲ್ಲಿ 153 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಗೇಲ್ ಅವರ ಬಿರುಸಿನ ಆಟದಲ್ಲಿ ಏಳು ಬೌಂಡರಿ ಹಾಗೂ ಐದು ಸಿಕ್ಸರ್‌ಗಳಿದ್ದವು. ಅವರಿಗೆ ಕೀರನ್    ಪೊಲಾರ್ಡ್ (ಔಟಾಗದೆ 63; 29 ಎಸೆತ, 5 ಬೌಂಡರಿ, 5 ಸಿಕ್ಸರ್) ಉತ್ತಮ ಬೆಂಬಲ ನೀಡಿದರು. 

ಸಂಕ್ಷಿಪ್ತ ಸ್ಕೋರ್:   ವೆಸ್ಟ್‌ಇಂಡೀಸ್: 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 209 (ಕ್ರಿಸ್ ಗೇಲ್ ಔಟಾಗದೆ 85, ಕೀರನ್ ಪೊಲಾರ್ಡ್ ಔಟಾಗದೆ 63; ಡಗ್ ಬ್ರೇಸ್‌ವೆಲ್ 47ಕ್ಕೆ1, ಕೇನ್ ವಿಲಿಯಮ್ಸನ್ 21ಕ್ಕೆ2); ನ್ಯೂಜಿಲೆಂಡ್: 18.3 ಓವರ್‌ಗಳಲ್ಲಿ 153 (ರಾಬ್ ನಿಕೋಲ್ 32, ಟಿಮ್ ಸೌಥಿ 23, ಜೇಕಬ್ ಓರಮ್ 27; ಸುನಿಲ್ ನಾರಾಯಣ 34ಕ್ಕೆ3):
ಫಲಿತಾಂಶ: ವಿಂಡೀಸ್‌ಗೆ 56 ರನ್‌ಗಳ ಜಯ.
ಪಂದ್ಯ ಶ್ರೇಷ್ಠ: ಕ್ರಿಸ್ ಗೇಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.