ADVERTISEMENT

ಕ್ರಿಕೆಟ್: ಗೋವಾ ಎದುರು ಕರ್ನಾಟಕ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:30 IST
Last Updated 20 ಅಕ್ಟೋಬರ್ 2012, 19:30 IST

ಬೆಂಗಳೂರು: ಕರ್ನಾಟಕ ತಂಡ ಇಲ್ಲಿ ನಡೆದ ವಿನೂ ಮಂಕಡ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಪಂದ್ಯದಲ್ಲಿ (ದಕ್ಷಿಣ ವಲಯ) ಗೋವಾ ತಂಡದ ಎದುರು ಎಂಟು ವಿಕೆಟ್‌ಗಳ ಗೆಲುವು ಸಾಧಿಸಿತು.

ಆದಿತ್ಯ ಗ್ಲೋಬಲ್ ಅಕಾಡೆಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗೋವಾ 24 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿತ್ತು. ಮಳೆ ಸುರಿದ ಕಾರಣ ಪಂದ್ಯವನ್ನು 24 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು.

ವಿಜೆಡಿ ನಿಯಮದ ಪ್ರಕಾರ ಅತಿಥೇಯ ಕರ್ನಾಟಕ ತಂಡ 19.2 ಓವರ್‌ಗಳಲ್ಲಿ 141 ರನ್ ಗಳಿಸುವ ಪರಿಷ್ಕ್ರತ ಗುರಿ ನೀಡಲಾಯಿತು.

ಸಂಕ್ಷಿಪ್ತ ಸ್ಕೋರು:
ಗೋವಾ 24 ಓವರ್‌ಗಳಲ್ಲಿ 2 ವಿಕೆಟ್‌ಗೆ 99. (ಪ್ರತಿಮೇಶ್ ಗವಾಸ್ ಔಟಾಗದೆ 42, ಮುಕುಂದ್ ಬಂಡೇಕರ್ ಔಟಾಗದೆ 21; ನವೀನ್ ಎಂ.ಜಿ. 16ಕ್ಕೆ1). ಕರ್ನಾಟಕ  18.3 ಓವರ್‌ಗಳಲ್ಲಿ 141 (ಶ್ರೇಯಸ್ ಗೋಪಾಲ್ ಔಟಾಗದೆ 58, ಕ್ರಾಂತಿ ಕುಮಾರ್ ಔಟಾಗದೆ 30; ಸಾಗರ್ ನಾಯ್ಕ 34ಕ್ಕೆ2). ಫಲಿತಾಂಶ: ವಿಜೆಡಿ ನಿಯಮದ ಪ್ರಕಾರ ಕರ್ನಾಟಕಕ್ಕೆ ಎಂಟು ವಿಕೆಟ್‌ಗಳ ಗೆಲುವು.

ನಾಯ್ಡು ಟ್ರೋಫಿಗೆ ಮಳೆ ಅಡ್ಡಿ: ಉದ್ಯಾನ ನಗರಿಯಲ್ಲಿ ನಡೆಯುತ್ತಿರುವ ಸಿ.ಕೆ. ನಾಯ್ಡು ಟ್ರೋಫಿ  (25 ವರ್ಷದೊಳಗಿನವರು) ಎಲೈಟ್ `ಎ~ ಗುಂಪಿನ ಕರ್ನಾಟಕ ಹಾಗೂ ಗುಜರಾತ್ ನಡುವಿನ ಶನಿವಾರದ ಆಟಕ್ಕೆ ಮಳೆ ಅಡ್ಡಿ ಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.