ADVERTISEMENT

ಕ್ರಿಕೆಟ್: ಜಿಂಬಾಬ್ವೆಗೆ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2011, 19:30 IST
Last Updated 16 ಆಗಸ್ಟ್ 2011, 19:30 IST
ಕ್ರಿಕೆಟ್: ಜಿಂಬಾಬ್ವೆಗೆ ರೋಚಕ ಜಯ
ಕ್ರಿಕೆಟ್: ಜಿಂಬಾಬ್ವೆಗೆ ರೋಚಕ ಜಯ   

ಹರಾರೆ: ಜಿಂಬಾಬ್ವೆ ತಂಡದವರು ಇಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಐದು ರನ್‌ಗಳ ರೋಚಕ ಗೆಲುವು ಸಾಧಿಸಿದ್ದಾರೆ. ಅಷ್ಟು ಮಾತ್ರವಲ್ಲದೇ, ಐದು ಪಂದ್ಯಗಳ ಸರಣಿಯನ್ನು 3-0ರಲ್ಲಿ ಜಯಿಸಿದ್ದಾರೆ.

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಮಂಗಳವಾರ ಜಿಂಬಾಬ್ವೆಯ 250 ರನ್‌ಗಳಿಗೆ ಉತ್ತರವಾಗಿ ಪ್ರವಾಸಿ ಬಾಂಗ್ಲಾದೇಶ 49.2 ಓವರ್‌ಗಳಲ್ಲಿ 245 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.

ತಂಡವನ್ನು ಒಂದು ಹಂತದಲ್ಲಿ ಗೆಲುವಿನ ಹಂತಕ್ಕೆ ತಂದು ನಿಲ್ಲಿಸಿದ್ದ ಮುಷ್ಫಿಕರ್ ರಹೀಮ್ (101; 100 ಎಸೆತ, 8 ಬೌಂಡರಿ, 1 ಸಿಕ್ಸ್) ಅವರ ಶತಕ ವ್ಯರ್ಥವಾಯಿತು. ರಹೀಮ್ ಕೊನೆಯ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಜೈಲ್ ಜರ್ವಿಸ್ (52ಕ್ಕೆ2) ಹಾಗೂ ಕ್ರಿಸ್ ಮೊಫು (43ಕ್ಕೆ2) ಕೊನೆಯಲ್ಲಿ ಪ್ರಭಾವಿ ಬೌಲಿಂಗ್ ದಾಳಿ ನಡೆಸಿದರು. 16 ರನ್‌ಗಳ ಅಂತರದಲ್ಲಿ ಕೊನೆಯ ಐದು ವಿಕೆಟ್‌ಗಳು ಪತನಗೊಂಡವು.

ಇದಕ್ಕೂ ಮೊದಲು ಆತಿಥೇಯ ಜಿಂಬಾಬ್ವೆ ಹ್ಯಾಮಿಲ್ಟನ್ ಮಸಕಜಾ ಹಾಗೂ ತಟೈಂಡ ಟಬು ಅವರ ಅರ್ಧ ಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್: ಜಿಂಬಾಬ್ವೆ: 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 250 (ಹ್ಯಾಮಿಲ್ಟನ್ ಮಸಕಜಾ 74, ತಟೈಂಡ ಟಬು 83, ಎಲ್ಟಾನ್ ಚಿಗುಂಬರ 31; ರುಬೆಲ್ ಹೊಸೇನ್ 41ಕ್ಕೆ2, ಶಕೀಬ್ ಅಲ್ ಹಸನ್ 46ಕ್ಕೆ2);

ಬಾಂಗ್ಲಾದೇಶ: 49.2 ಓವರ್‌ಗಳಲ್ಲಿ 245 (ತಮೀಮ್ ಇಕ್ಬಾಲ್ 44, ಮುಷ್ಫಿಕರ್ ರಹೀಮ್ 101, ಶುವಗೊಟೊ ಹೊಮ್ 32; ಜೈಲ್ ಜರ್ವಿಸ್ 52ಕ್ಕೆ2, ಕ್ರಿಸ್ ಮೊಫು 43ಕ್ಕೆ2, ಪ್ರಾಸ್ಪರ್ ಉತ್ಸೆಯಾ 47ಕ್ಕೆ3): ಫಲಿತಾಂಶ: ಜಿಂಬಾಬ್ವೆಗೆ 5 ರನ್‌ಗಳ ಜಯ ಹಾಗೂ ಐದು ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ. ಪಂದ್ಯ ಶ್ರೇಷ್ಠ: ಮುಷ್ಫಿಕರ್ ರಹೀಮ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.