ಮುಂಬೈ (ಪಿಟಿಐ): ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲೂ ಡ್ರಾ ಸಾಧಿಸಿದೆ. ಮುಂಬೈ `ಎ~ ವಿರುದ್ಧದ ಮೂರು ದಿನಗಳ ಪಂದ್ಯ ಸೋಮವಾರ ನೀರಸ ಡ್ರಾದಲ್ಲಿ ಅಂತ್ಯಗೊಂಡಿತು.
ಆದರೂ ಪ್ರವಾಸಿ ತಂಡ ಈ ಪಂದ್ಯದಿಂದ ಕೆಲವೊಂದು ಸಕಾರಾತ್ಮಕ ಅಂಶಗಳನ್ನು ಪಡೆದುಕೊಂಡಿತು. ಪ್ರಮುಖ ಬ್ಯಾಟ್ಸ್‌ಮನ್‌ಗಳು ಉತ್ತಮ ಆಟದ ಮೂಲಕ ಮುಂಬರುವ ಟೆಸ್ಟ್ ಸರಣಿಗೆ ಸಜ್ಜಾದರು. ಸ್ಪಿನ್ನರ್‌ಗಳೂ ತಮ್ಮ ಕೈಚಳಕ ತೋರಿದರು.
ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಅಂತಿಮ ದಿನವಾದ ಸೋಮವಾರ ಮುಂಬೈ `ಎ~ ತಂಡವನ್ನು 286 ರನ್‌ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 59 ರನ್‌ಗಳ ಮುನ್ನಡೆ ಪಡೆಯಿತು.
ಪಂದ್ಯ ಡ್ರಾದಲ್ಲಿ ಕೊನೆಗೊಂಡಾಗ ಪ್ರವಾಸಿ ತಂಡ ತನ್ನ ಎರಡನೇ ಇನಿಂಗ್ಸ್‌ನಲ್ಲಿ 52 ಓವರ್‌ಗಳಲ್ಲಿ 2 ವಿಕೆಟ್‌ಗೆ 149 ರನ್ ಗಳಿಸಿತ್ತು. ಜೋ ರೂಟ್ (24) ಮತ್ತು ಜೊನಾಥನ್ ಟ್ರಾಟ್ (30) ಔಟಾದ ಬ್ಯಾಟ್ಸ್‌ಮನ್‌ಗಳು. ಅಜೇಯ ಅರ್ಧಶತಕ ಗಳಿಸಿದ ನಿಕ್ ಕಾಂಪ್ಟನ್ (64, 162 ಎಸೆತ, 6 ಬೌಂ) ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರಯತ್ನ ನಡೆಸಿದರು. ಇಯಾನ್ ಬೆಲ್ 28 ರನ್‌ಗಳೊಂದಿಗೆ ಅಜೇಯರಾಗುಳಿದರು.
ಇದಕ್ಕೂ ಮುನ್ನ ನಾಲ್ಕು ವಿಕೆಟ್‌ಗೆ 232 ರನ್‌ಗಳಿಂದ ದಿನದಾಟ ಆರಂಭಿಸಿದ್ದ ಮುಂಬೈ `ಎ~ ಬೇಗನೇ ಆಲೌಟಾಯಿತು. 84 ರನ್ ಗಳಿಸಿ ಅಜೇಯರಾಗುಳಿದಿದ್ದ ಹಿಕೇನ್ ಶಾ (92) ಶತಕ ಪೂರೈಸುವಲ್ಲಿ ವಿಫಲರಾದರು.
ಮಾಂಟಿ ಪನೇಸರ್ (64ಕ್ಕೆ 3) ಮತ್ತು ಸಮಿತ್ ಪಟೇಲ್ (44ಕ್ಕೆ 3) ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಬೇಗನೇ ಪೆವಿಲಿಯನ್‌ಗಟ್ಟಿದರು. ಆತಿಥೇಯ ತಂಡದ ಕೊನೆಯ ಐದು ವಿಕೆಟ್‌ಗಳು 22 ರನ್‌ಗಳ ಅಂತರದಲ್ಲಿ ಉರುಳಿದವು.
ಇಂಗ್ಲೆಂಡ್ ಮತ್ತು ಭಾರತ `ಎ~ ನಡುವಿನ ಮೊದಲ ಅಭ್ಯಾಸ ಪಂದ್ಯವೂ ಡ್ರಾದಲ್ಲಿ ಕೊನೆಗೊಂಡಿತು. ಅಹಮದಾಬಾದ್‌ನಲ್ಲಿ ನವೆಂಬರ್ 8 ರಿಂದ 11ರ ವರೆಗೆ ನಡೆಯಲಿರುವ ಕೊನೆಯ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಹರಿಯಾಣ ವಿರುದ್ಧ ಪೈಪೋಟಿ ನಡೆಸಲಿದೆ.
ಸ್ಕೋರ್ ವಿವರ:
ಇಂಗ್ಲೆಂಡ್: ಮೊದಲ ಇನಿಂಗ್ಸ್ 93 ಓವರ್‌ಗಳಲ್ಲಿ 9 ವಿಕೆಟ್‌ಗೆ 345 ಡಿಕ್ಲೇರ್ಡ್
ಮುಂಬೈ `ಎ~: ಮೊದಲ ಇನಿಂಗ್ಸ್
101.4 ಓವರ್‌ಗಳಲ್ಲಿ 286
(ಭಾನುವಾರದ ಆಟದ ಅಂತ್ಯಕ್ಕೆ 80.4 ಓವರ್‌ಗಳಲ್ಲಿ 4 ವಿಕೆಟ್‌ಗೆ 232)
ಹಿಕೇನ್ ಶಾ ಸಿ ಬೈಸ್ಟೋವ್ ಬಿ ಗ್ರಹಾಮ್ ಆನಿಯನ್ಸ್ 92
ನಿಖಿಲ್ ಪಾಟೀಲ್ ಸಿ ಬೆಲ್ ಬಿ ಮಾಂಟಿ ಪನೇಸರ್ 17
ಶೋಯಬ್ ಶೇಖ್ ಔಟಾಗದೆ 13
ಸೂಫಿಯಾನ್ ಸಿ ಕಾಂಪ್ಟನ್ ಬಿ ಸಮಿತ್ ಪಟೇಲ್ 01
ಶಾದೂಲ್ ಠಾಕೂರ್ ಸಿ ಆನಿಯನ್ಸ್ ಬಿ ಪನೇಸರ್ 01
ವೇಂಗಾಂಕರ್ ಸಿ ಟ್ರಾಟ್ ಬಿ ಸಮಿತ್ ಪಟೇಲ್ 14
ಜಾವೇದ್ ಖಾನ್ ಬಿ ಸಮಿತ್ ಪಟೇಲ್ 00
ಇತರೆ: (ಬೈ-6, ಲೆಗ್‌ಬೈ-2, ವೈಡ್-1, ನೋಬಾಲ್-3) 12
ವಿಕೆಟ್ ಪತನ: 1-19 (ಭವಿನ್; 11.2), 2-47 (ಧವನ್; 18.5), 3-210 (ಪೂಜಾರ), 4-232 (ಯಾದವ್; 80.4), 5-240 (ಶಾ; 81.4), 6-263 (ಪಾಟೀಲ್; 94.6), 7-265 (ಶೋಯಬ್; 97.1), 8-270 (ಠಾಕೂರ್; 98.2), 9-286 (ವೇಂಗಾಂಕರ್; 101.3), 10-286 (ಖಾನ್; 101.4)
ಬೌಲಿಂಗ್: ಜೇಮ್ಸ ಆ್ಯಂಡರ್‌ಸನ್ 20-11-40-1, ಸ್ಟುವರ್ಟ್ ಬ್ರಾಡ್ 10-2-19-0, ಗ್ರಹಾಮ್ ಆನಿಯನ್ಸ್ 16-2-57-2, ಮಾಂಟಿ ಪನೇಸರ್ 28-8-64-3, ಜೋ ರೂಟ್ 13-3-43-1, ಸಮಿತ್ ಪಟೇಲ್ 11.4-1-44-3, ಜೊನಾಥನ್ ಟ್ರಾಟ್ 3-0-11-0
ಇಂಗ್ಲೆಂಡ್: ಎರಡನೇ ಇನಿಂಗ್ಸ್ 52 ಓವರ್‌ಗಳಲ್ಲಿ 2 ವಿಕೆಟ್‌ಗೆ 149
ರೂಟ್ ಎಲ್‌ಬಿಡಬ್ಲ್ಯು ಬಿ ಶಾದೂಲ್ ಠಾಕೂರ್ 24
ನಿಕ್ ಕಾಂಪ್ಟನ್ ಔಟಾಗದೆ 64
ಜೊನಾಥನ್ ಟ್ರಾಟ್ ಎಲ್‌ಬಿಡಬ್ಲ್ಯು ಬಿ ಸೂರ್ಯಕುಮಾರ್ ಯಾದವ್ 30
ಇಯಾನ್ ಬೆಲ್ ಔಟಾಗದೆ 28
ಇತರೆ: (ಬೈ-1, ನೋಬಾಲ್-2) 03
ವಿಕೆಟ್ ಪತನ: 1-38 (ರೂಟ್; 12.6), 2-95 (ಟ್ರಾಟ್; 37.3)
ಬೌಲಿಂಗ್: ಕ್ಷೇಮಲ್ ವೇಂಗಾಂಕರ್ 6-1-10-0, ಜಾವೇದ್ ಖಾನ್ 14-2-48-0, ಶಾದೂಲ್ ಠಾಕೂರ್ 10-4-20-1, ಶೋಯಬ್ ಶೇಖ್ 5-2-9-0, ಸೂರ್ಯಕುಮಾರ್ ಯಾದವ್ 12-1-38-1, ಚೇತೇಶ್ವರ ಪೂಜಾರ 3-0-13-0, ಶಿಖರ್ ಧವನ್ 2-0-10-0
ಫಲಿತಾಂಶ: ಪಂದ್ಯ ಡ್ರಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.