ADVERTISEMENT

ಕ್ರಿಕೆಟ್‌: ಸೋಲಿನ ಸುಳಿಯಲ್ಲಿ ಆಸ್ಟ್ರೇಲಿಯಾ

ಪಿಟಿಐ
Published 1 ಏಪ್ರಿಲ್ 2018, 19:37 IST
Last Updated 1 ಏಪ್ರಿಲ್ 2018, 19:37 IST
ಕ್ರಿಕೆಟ್‌: ಸೋಲಿನ ಸುಳಿಯಲ್ಲಿ ಆಸ್ಟ್ರೇಲಿಯಾ
ಕ್ರಿಕೆಟ್‌: ಸೋಲಿನ ಸುಳಿಯಲ್ಲಿ ಆಸ್ಟ್ರೇಲಿಯಾ   

ಜೊಹಾನ್ಸ್‌ಬರ್ಗ್‌ (ಎಎಫ್‌ಪಿ): ಬ್ಯಾಟಿಂಗ್‌ನಲ್ಲಿ ಎಡವಿದ ಆಸ್ಟ್ರೇಲಿಯಾ ತಂಡದವರು ದಕ್ಷಿಣ ಆಫ್ರಿಕಾ ಎದುರಿನ ನಾಲ್ಕನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಸೋಲಿನ ಭೀತಿ ಎದುರಿಸಿದ್ದಾರೆ.

ನ್ಯೂ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟಿಮ್‌ ಪೇನ್‌ ಪಡೆ 70 ಓವರ್‌ಗಳಲ್ಲಿ 221ರನ್‌ಗಳಿಗೆ ಆಲೌಟ್‌ ಆಗಿದೆ. ದ್ವಿತೀಯ ಇನಿಂಗ್ಸ್‌ ಆರಂಭಿಸಿರುವ ದಕ್ಷಿಣ ಆಫ್ರಿಕಾ ದಿನದಾಟದ ಅಂತ್ಯಕ್ಕೆ 56 ಓವರ್‌ಗಳಲ್ಲಿ 3 ವಿಕೆಟ್‌ಗೆ 134ರನ್‌ ಗಳಿಸಿ ಒಟ್ಟು ಮುನ್ನಡೆಯನ್ನು 401ರನ್‌ಗಳಿಗೆ ಹೆಚ್ಚಿಸಿಕೊಂಡಿದೆ. ಈ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 136.5 ಓವರ್‌ಗಳಲ್ಲಿ 488ರನ್‌ ಕಲೆಹಾಕಿತ್ತು.

6 ವಿಕೆಟ್‌ಗೆ 110ರನ್‌ಗಳಿಂದ ಭಾನುವಾರ ಆಟ ಮುಂದುವರಿಸಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಟಿಮ್‌ ಪೇನ್‌ (62; 96ಎ, 7ಬೌಂ, 2ಸಿ) ಮತ್ತು ಪ್ಯಾಟ್‌ ಕಮಿನ್ಸ್‌ (50; 92ಎ, 6ಬೌಂ, 1ಸಿ) ಆಸರೆಯಾದರು. ಇವರು ಏಳನೇ ವಿಕೆಟ್‌ಗೆ 99ರನ್‌ ಗಳಿಸಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟಿತು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ, ಮೊದಲ ಇನಿಂಗ್ಸ್, 136.5 ಓವರ್‌ಗಳಲ್ಲಿ 488 ಮತ್ತು 56 ಓವರ್‌ಗಳಲ್ಲಿ 3 ವಿಕೆಟ್‌ಗೆ 134 (ಏಡನ್‌ ಮಾರ್ಕರಮ್‌ 37, ಡೀನ್‌ ಎಲ್ಗರ್‌ ಬ್ಯಾಟಿಂಗ್‌ 39, ಹಾಶೀಮ್‌ ಆಮ್ಲಾ 16, ಫಾಫ್‌ ಡು ಪ್ಲೆಸಿ ಬ್ಯಾಟಿಂಗ್‌ 34; ನೇಥನ್‌ ಲಿಯೊನ್‌ 44ಕ್ಕೆ1, ಪ್ಯಾಟ್‌ ಕಮಿನ್ಸ್‌ 35ಕ್ಕೆ2).

ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌, 70 ಓವರ್‌ಗಳಲ್ಲಿ 221 (ಟಿಮ್‌ ಪೇನ್‌ 62, ಪ್ಯಾಟ್‌ ಕಮಿನ್ಸ್‌ 50, ವರ್ನಾನ್‌ ಫಿಲ್ಯಾಂಡರ್‌ 30ಕ್ಕೆ3, ಕಗಿಸೊ ರಬಾಡ 53ಕ್ಕೆ3, ಮಾರ್ನ್‌ ಮಾರ್ಕೆಲ್‌ 34ಕ್ಕೆ1, ಕೇಶವ್‌ ಮಹಾರಾಜ್‌ 92ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.