ADVERTISEMENT

ಗನ್ ಹಿಡಿದ ಈಜು ಸ್ಪರ್ಧಿಗಳ ಚಿತ್ರ: ಎಒಸಿ ಕಿಡಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2012, 19:30 IST
Last Updated 7 ಜೂನ್ 2012, 19:30 IST

ಸಿಡ್ನಿ (ಎಎಫ್‌ಪಿ): ಸದಾ ವಿವಾದಗಳ ಸುಳಿಯಲ್ಲಿ ಸಿಲುಕಿರುವ ಆಸ್ಟ್ರೇಲಿಯಾದ ಈಜು ಸ್ಪರ್ಧಿಗಳಾದ ನಿಕ್ ಡೆ ಆರ್ಕಿ ಹಾಗೂ ಕೆನ್ರಿಕ್ ಮಾಂಕ್ ಅವರು ಗನ್ ಹಿಡಿದುಕೊಂಡಿರುವ ತಮ್ಮ ಚಿತ್ರವನ್ನು ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಇದೇ ಕಾರಣಕ್ಕಾಗಿ ಇವರಿಬ್ಬರೂ ಆಸ್ಟ್ರೇಲಿಯಾ ಒಲಿಂಪಿಕ್ ಸಮಿತಿ (ಎಒಸಿ) ಕೆಂಗಣ್ಣಿಗೆ ಗುರಿಯಾಗಿದ್ದಾರೆ.

2012 ಆಸ್ಟ್ರೇಲಿಯಾ ಒಲಿಂಪಿಕ್ ತಂಡದಲ್ಲಿರುವ ಈ ಈಜು ಸ್ಪರ್ಧಿಗಳು ಅಮೆರಿಕಾದಲ್ಲಿನ ಗನ್ ಮಾರಾಟದ ಅಂಗಡಿಯೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗನ್ ಕೈಯಲ್ಲಿ ಹಿಡಿದುಕೊಂಡು ಛಾಯಾಚಿತ್ರ ತೆಗೆಸಿಕೊಂಡಿದ್ದರು. ಅದೇ ಚಿತ್ರವನ್ನು ಸಾಮಾಜಿಕ ಜಾಲತಾಣಗಳಿಗೂ ಹರಿಬಿಟ್ಟಿದ್ದರು. ಅವರ ಈ ರೀತಿಯ ವರ್ತನೆಯನ್ನು ಎಒಸಿ `ಮೂರ್ಖತನ~ ಎಂದು ಕಿಡಿಕಾರಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.