ADVERTISEMENT

ಗಾಲ್ಫ್: ಮುನ್ನಡೆಯಲ್ಲಿ ಅಸ್ತಾ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 19:59 IST
Last Updated 10 ಜೂನ್ 2013, 19:59 IST
ಮೊದಲ ದಿನ ಮುನ್ನಡೆ ಸಾಧಿಸಿದ ಅಸ್ತಾ ಮದನ್ 	ಪ್ರಜಾವಾಣಿ ಚಿತ್ರ
ಮೊದಲ ದಿನ ಮುನ್ನಡೆ ಸಾಧಿಸಿದ ಅಸ್ತಾ ಮದನ್ ಪ್ರಜಾವಾಣಿ ಚಿತ್ರ   

ಬೆಂಗಳೂರು: ಗುಡಗಾಂವ್‌ನ ಅಸ್ತಾ ಮದನ್ ಇಲ್ಲಿ ಆರಂಭವಾದ ಉಷಾ- ಐಜಿಯು ಸದರ್ನ್ ಇಂಡಿಯಾ ಮಹಿಳೆಯರ ಮತ್ತು ಜೂನಿಯರ್ ಬಾಲಕಿಯರ ಗಾಲ್ಫ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನ ಬಳಿಕ ಮುನ್ನಡೆ ಪಡೆದಿದ್ದಾರೆ.

ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ಸೋಮವಾರ ಮೊದಲ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ಅಸ್ತಾ 72 ಅವಕಾಶಗಳನ್ನು ಬಳಸಿಕೊಂಡರು. ಅಮೃತಾ ಆನಂದ್ ಮತ್ತು ಗೌರಿ ಮೋಂಗಾ (73) ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.

ತ್ವೇಸಾ ಮಲಿಕ್, ಗುರ್‌ಸಿಮರ್ ಬದ್ವಾಲ್ ಹಾಗೂ ರಕ್ಷಾ ಫಡ್ಕೆ (ತಲಾ 74) ಬಳಿಕ ಸ್ಥಾನಗಳಲ್ಲಿದ್ದಾರೆ. ಹೋದ ವಾರ ನಡೆದ ಕರ್ನಾಟಕ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಗುರ್ಬಾನಿ ಸಿಂಗ್ ನಿಖರ ಪ್ರದರ್ಶನ ನೀಡಲು ವಿಫಲರಾದರು. ಅವರಿಗೆ ಸ್ಪರ್ಧೆ ಕೊನೆಗೊಳಿಸಲು 75 ಅವಕಾಶಗಳು ಬೇಕಾದವು.

ಸ್ಥಳೀಯ ಪ್ರತಿಭೆ ಅದಿತಿ ಅಶೋಕ್ (76) ಕೂಡಾ ಮೊದಲ ಸುತ್ತಿನಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.