ADVERTISEMENT

ಗೆಲುವಿನ ವಿಶ್ವಾಸದಲ್ಲಿ ಮೋದಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ಜೈಪುರ (ಪಿಟಿಐ): ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಸ್ಪರ್ಧೆಯಿಂದಾಗಿ ಭಾರಿ ಕುತೂಹಲ ಕೆರಳಿಸಿದ್ದ ರಾಜಸ್ತಾನ ಕ್ರಿಕೆಟ್ ಸಂಸ್ಥೆಗೆ (ಆರ್‌ಸಿಎ) ಗುರುವಾರ ಮತದಾನ ನಡೆದಿದೆ.

ಜನವರಿ 16 ರಂದು ಫಲಿತಾಂಶ ಪ್ರಕಟಗೊಳ್ಳಲಿದ್ದು,  ಮೋದಿ ಬಣ ಗೆಲುವಿನ ವಿಶ್ವಾಸದಲ್ಲಿದೆ.

ವೀಕ್ಷಕರಾಗಿ ಸುಪ್ರೀಂ ಕೋರ್ಟ್‌ ನೇಮಿಸಿರುವ  ನಿವೃತ್ತ ನ್ಯಾಯಮೂರ್ತಿ ನರೇಂದ್ರ ಮೋಹನ್ ಕಸ್ಲಿವಾಲ್ ಅವರ ಉಸ್ತುವಾರಿಯಲ್ಲಿ ಚುನಾವಣೆ ನಡೆದಿದೆ. ಕೋರ್ಟ್ ನಿರ್ದೇಶನದಂತೆ ಕಸ್ಲಿವಾಲ್ ಅವರು ಮತದಾನಕ್ಕೆ ಸಂಬಂಧಿಸಿದ ವರದಿ ಯೊಂದಿಗೆ  ಮತಪೆಟ್ಟಿಗೆಗಳನ್ನು ಸುಪ್ರೀಂಕೋರ್ಟ್‌ ಗೆ ಕಳುಹಿಸಿದ್ದಾರೆ.

ಒಟ್ಟು 33 ಜಿಲ್ಲಾ ಕ್ರಿಕೆಟ್ ಸಂಸ್ಥೆಗಳು ಮತದಾನದಲ್ಲಿ ಪಾಲ್ಗೊಂ ಡಿದ್ದು,  ಇದರಲ್ಲಿ 29 ಜಿಲ್ಲಾ ಕ್ರಿಕೆಟ್ ಸಂಸ್ಥೆಗಳನ್ನು ಮಾತ್ರ ಫಲಿತಾಂಶದ ವೇಳೆ ಪರಿಗಣಿಸಲಾಗುತ್ತದೆ. ಉಳಿದ ನಾಲ್ಕು ಸಂಸ್ಥೆಗಳು ವಿವಾದಕ್ಕೆ ಒಳಗಾಗಿರುವುದರಿಂದ, ಅಗತ್ಯವಿದ್ದರೆ ಮಾತ್ರ ಈ ಸಂಸ್ಥೆಗಳ ಮತಗಳನ್ನು ಬಳಸಿಕೊಳ್ಳಲಾಗುತ್ತದೆ.

ಪತ್ರ: ಚುನಾವಣೆಯಲ್ಲಿ ಲಲಿತ್‌ ಮೋದಿ ಸ್ಪರ್ಧಿಸಿರುವ ಕಾರಣ ಸಂಸ್ಥೆಯ ಮಾನ್ಯತೆ ರದ್ದುಗೊಳಿಸುವ ಬೆದರಿಕೆ ಒಡ್ಡಿರುವ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ಆರ್‌ಸಿಎ  ಉಸ್ತುವಾರಿ ಕಾರ್ಯದರ್ಶಿ ಕೆ.ಕೆ. ಶರ್ಮಾ  ಗುರುವಾರ ಪತ್ರ ಬರೆದಿದ್ದಾರೆ.

‘2005ರ ರಾಜಸ್ತಾನ ಕ್ರೀಡಾ ಕಾಯ್ದೆಯ ಪ್ರಕಾರವಾಗಿ ಆರ್‌ಸಿಎ  ಆಡಳಿತ ನಡೆಸುತ್ತಿದೆ. ಇದು ಶಾಸನಬದ್ದ ಕಾಯ್ದೆಯಾಗಿರು ವುದರಿಂದ ಇದನ್ನು ಮುಂದುವರಿಸಿ ಕೊಂಡು ಹೋಗಲಾಗುತ್ತಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆಯೇ ಚುನಾವಣೆ   ನಡೆಸಲಾಗಿದೆ’ ಎಂದು ಶರ್ಮಾ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.