ADVERTISEMENT

ಘಾನಾಗೆ ಮಾಲಿ ಸವಾಲು

ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌: ಇಂದಿನಿಂದ ಕ್ವಾರ್ಟರ್‌ ಫೈನಲ್‌ ಹಣಾಹಣಿ

ಪಿಟಿಐ
Published 20 ಅಕ್ಟೋಬರ್ 2017, 19:30 IST
Last Updated 20 ಅಕ್ಟೋಬರ್ 2017, 19:30 IST
ಘಾನಾಗೆ ಮಾಲಿ ಸವಾಲು
ಘಾನಾಗೆ ಮಾಲಿ ಸವಾಲು   

ಗುವಾಹಟಿ (ಎಎಫ್‌ಪಿ): ಫಿಫಾ 17 ವರ್ಷದೊಳಗಿವನರ ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್ ಫೈನಲ್‌ ಹಣಾಹಣಿ ಇಂದಿನಿಂದ ನಡೆಯಲಿದ್ದು ಮೊದಲ ಪಂದ್ಯದಲ್ಲಿ ಘಾನಾ ಮತ್ತು ಮಾಲಿ ತಂಡಗಳು ಸೆಣಸಲಿವೆ. ಎರಡನೇ ಪಂದ್ಯದಲ್ಲಿ ಅಮೆರಿಕಗೆ ಇಂಗ್ಲೆಂಡ್‌ ಸವಾಲೆಸೆಯಲಿದೆ.

ಬುಧವಾರ ನಡೆದ ಕೊನೆಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಘಾನಾ ತಂಡದವರು ನೈಗರ್‌ ಎದುರು ಗೆದ್ದು ಎಂಟರ ಘಟ್ಟಕ್ಕೆ ಪ್ರವೇಶಿಸಿತ್ತು.

ಇರಾಕ್ ವಿರುದ್ಧ 5–1ರ ಜಯ ಸಾಧಿಸಿದ ಮಾಲಿ ವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಶನಿವಾರದ ಪಂದ್ಯದಲ್ಲಿ ಗೆದ್ದರೆ 17 ವರ್ಷದೊಳಗಿನವರ ಆಫ್ರಿಕನ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಪ್ರತೀಕಾರ ತೀರಿಸಿದ ತೃಪ್ತಿಯೂ ಮಾಲಿ ತಂಡಕ್ಕೆ ಸಿಗಲಿದೆ. ‌

ADVERTISEMENT

ಅಜೇಯರಿಗೆ ಬಲಿಷ್ಠರ ಸವಾಲು

ಟೂರ್ನಿಯಲ್ಲಿ ಇಲ್ಲಿಯವರೆಗೆ ಸೋಲು ಕಾಣದಿರುವ ಇಂಗ್ಲೆಂಡ್ ಗೋವಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಲಿದೆ. ಉಭಯ ತಂಡಗಳು ಕೂಡ ಪಂದ್ಯದಲ್ಲಿ ಜಯಿಸುವ ಭರವಸೆಯಲ್ಲಿವೆ. ಎರಡೂ ತಂಡಗಳ ಕೋಚ್‌ಗಳು ಶುಕ್ರವಾರ ಭರವಸೆಯಿಂದಲೇ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

‘ನಾಕೌಟ್ ಹಂತ ಬಹಳ ಕಠಿಣ. ಆದರೂ ನಮ್ಮ ತಂಡಕ್ಕೆ ಆತಂಕವಿಲ್ಲ. ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜಪಾನ್‌ನ ರಕ್ಷಣಾ ಕೋಟೆಯನ್ನು ಭೇದಿಸಲು ಪ್ರಯಾಸಪಟ್ಟ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದು ಈ ಹಂತಕ್ಕೆ ಪ್ರವೇಶಿಸಿದೆ. ಶನಿವಾರದ ಪಂದ್ಯದಲ್ಲೂ ತಂಡ ಬಲಿಷ್ಠ ಎದುರಾಳಿಯ ವಿರುದ್ಧ ಸೆಣಸಬೇಕಾಗಿದೆ. ಆದರೂ ಪಂದ್ಯದಲ್ಲಿ ಜಯ ಸಾಧಿಸುವ ಭರವಸೆ ಇದೆ’ ಎಂದು ಇಂಗ್ಲೆಂಡ್ ಕೋಚ್‌ ಕೂಪರ್ ಹೇಳಿದರು.

‘ಇಂಗ್ಲೆಂಡ್‌ ತುಂಬ ಬಲಿಷ್ಠವಾಗಿದೆ. ಇಂಥ ತಂಡವನ್ನು ಎಚ್ಚರಿಕೆಯಿಂದ ಎದುರಿಸಲು ನಮ್ಮ ತಂಡ ಸನ್ನದ್ಧರಾಗಿದೆ. ಆ ತಂಡದ ಅಜೇಯ ಓಟಕ್ಕೆ ಬ್ರೇಕ್ ಹಾಕಿ ಮುಂದೆ ಸಾಗುವುದು ನಮ್ಮ ಉದ್ದೇಶ’ ಎಂದು ಅಮೆರಿಕ ಕೋಚ್ ಜಾನ್‌ ಹಾಕ್ವರ್ಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.