
ಪ್ರಜಾವಾಣಿ ವಾರ್ತೆವಡೋದರ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಮುಖ್ಯಸ್ಥ ಚಿರಾಯು ಅಮಿನ್ ಬರೋಡಾ ಕ್ರಿಕೆಟ್ ಸಂಸ್ಥೆಗೆ (ಬಿಸಿಎ) ನಡೆದ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ.
ಬಿಸಿಎ ಹಾಲಿ ಅಧ್ಯಕ್ಷರೂ ಆಗಿದ್ದ ಅಮಿನ್ ಚುನಾವಣೆಯಲ್ಲಿ ಸಿಮಾರ್ಜಿತ್ ಸಿನ್ಹ ಗಾಯಕ್‌ವಾಡ್ ಎದುರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಮಂಗಳವಾರ ಫಲಿತಾಂಶ ಪ್ರಕಟಗೊಂಡಿದ್ದು, ಅವರು 848 ಮತ ಪಡೆಯುವ ಮೂಲಕ ತಮ್ಮ ಎದುರಾಳಿ ಸಿಮಾರ್ಜಿತ್ (1066) ಎದುರು 218 ಮತಗಳ ಅಂತರದಿಂದ ಪರಾಜಿತರಾಗಿದ್ದಾರೆ.
ಇದರೊಂದಿಗೆ ಚಿರಾಯು ಅವರ 26 ವರ್ಷಗಳ ಆಡಳಿತಕ್ಕೆ ತೆರೆ ಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.