ADVERTISEMENT

ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST

ಟೆನಿಕಾಯ್ಟ್‌: ಮೈಸೂರು, ಬೆಂಗಳೂರಿಗೆ ಪ್ರಶಸ್ತಿ
ಹೊಸಕೋಟೆ: ಮೈಸೂರಿನ ಬಾಲಕಿಯರ ತಂಡ ಹೊಸಕೋಟೆಯಲ್ಲಿ ಬುಧವಾರ ಮುಕ್ತಾಯಗೊಂಡ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಟೆನಿಕಾಯ್ಟ್ ಟೂರ್ನಿಯಲ್ಲಿ ಪ್ರಶಸ್ತಿ ಗಳಿಸಿದೆ. ಫೈನಲ್‌ ಪಂದ್ಯದಲ್ಲಿ ಮೈಸೂರು ತಂಡ 21–5,21–12, 21–15 ಹಾಗೂ 21–18 ನೇರ ಸೆಟ್‌ಗಳಿಂದ ಮಂಡ್ಯ ತಂಡದ ವಿರುದ್ದ ಜಯ ಗಳಿಸಿತು. ಬಾಲಕರ ವಿಭಾಗದ ಫೈನಲ್‌ನಲ್ಲಿ ಬೆಂಗಳೂರು ಉತ್ತರ ತಂಡ 21–5, 21–5, 21–12 ಹಾಗೂ 21–8 ನೇರ ಸೆಟ್‌ಗಳಿಂದ ಉಡುಪಿ ತಂಡದ ವಿರುದ್ದ ಜಯ ಗಳಿಸಿ ಪ್ರಶಸ್ತಿ ಪಡೆಯಿತು. ಶಾಸಕ ಎನ್.ನಾಗರಾಜು ಬಹುಮಾನ ವಿತರಿಸಿದರು.

ಹಾಕಿ: ಡ್ರಾ ಪಂದ್ಯದಲ್ಲಿ ವಾಸು ಕ್ಲಬ್‌
ಬೆಂಗಳೂರು:
ವಾಸು ಸ್ಪೋರ್ಟ್ಸ್‌ ಕ್ಲಬ್‌ ಮತ್ತು ಧಾರವಾಡದ ಭಾರತ ಕ್ರೀಡಾ ಪ್ರಾಧಿಕಾರ ತಂಡಗಳ ನಡುವಿನ ರಾಜ್ಯ ‘ಬಿ’ ಡಿವಿಷನ್ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನ ಬುಧವಾರದ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು. ಇದರೊಂದಿಗೆ ಮೊದಲ ಹಂತದ ಪಂದ್ಯಗಳು ಅಂತ್ಯಗೊಂಡವು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ತಲಾ ಎರಡು ಗೋಲುಗಳನ್ನು ಕಲೆ ಹಾಕಿದವು.

ಹುಬ್ಬಳ್ಳಿಯ ವಾಸು ಕ್ಲಬ್‌ನ ಭರತ್‌ (35ನೇ ನಿಮಿಷ) ಮತ್ತು ಸಾಹಿಲ್‌ (45ನೇ ನಿ.) ಗೋಲು ಗಳಿಸಿದರು.

ನಂತರ ಧಾರವಾಡ ತಂಡದ ವಿ.ಟಿ. ಮನು (20ನೇ ನಿಮಿಷ) ಹಾಗೂ ಚರಣ್‌ (49ನೇ ನಿ.) ಗೋಲು ತಂದಿತ್ತು
ಸೋಲಿನ ಸುಳಿಯಿಂದ ತಂಡವನ್ನು ಪಾರು ಮಾಡಿದವು.

ಮೊದಲ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಪ್ರೀಮ್‌ರೋಸ್‌ ಕ್ಲಬ್‌, ರೇಂಜರ್ಸ್‌್ ಕ್ಲಬ್‌, ಆರ್‌ಡಿಟಿ ಅಕಾಡೆಮಿ ಮತ್ತು ಕೊಡವ ಸಮಾಜ ತಂಡಗಳು ಎರಡನೇ ಹಂತಕ್ಕೆ ಅರ್ಹತೆ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.