ADVERTISEMENT

ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ಟಿಟಿ: ಕೇದಾರಿ-ನಾಗರತ್ನ ಮುಡಿಗೆ ಪ್ರಶಸ್ತಿ
ಬೆಂಗಳೂರು: ಕರ್ನಾಟಕದ ಕೆ.ಎಸ್. ಕೇದಾರಿ ಹಾಗೂ ನಾಗರತ್ನಾ  ಶ್ರೀನಗರದಲ್ಲಿ ನಡೆದ ಹಿರಿಯರ 34ನೇ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಗುರುವಾರ ನಡೆದ ಫೈನಲ್ ಹಣಾಹಣಿಯಲ್ಲಿ ಕೇದಾರಿ-ನಾಗರತ್ನಾ ಜೋಡಿ 50 ವರ್ಷ ವಯಸ್ಸಿಗೂ ಹೆಚ್ಚಿನವರ ವಿಭಾಗ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದುಕೊಂಡರು. ಮಹಿಳೆಯರ ತಂಡ ವಿಭಾಗದ ಸ್ಪರ್ಧೆಯಲ್ಲಿ ಮಂದಾಕಿನಿ ಡಿ., ನಾಗರತ್ನಾ, ಗಾಯತ್ರಿ ಅಡಿಗ, ರಾಜಲಕ್ಷ್ಮಿ ಅವರನ್ನೊಳಗೊಂಡ ತಂಡ ಬೆಳ್ಳಿ ಪದಕ ಜಯಿಸಿತು.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡ
ಬೆಂಗಳೂರು:
ಪುಣೆಯಲ್ಲಿ ಏಪ್ರಿಲ್ 26ರಿಂದ 28ರ ವರೆಗೆ ನಡೆಯಲಿರುವ 12ನೇ ಸೀನಿಯರ್ ಹಾಗೂ 7ನೇ ಜೂನಿಯರ್ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ಗೆ ಐವರು ಸದಸ್ಯರನ್ನೊಳಗೊಂಡ ಕರ್ನಾಟಕ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ.

ಪ್ಯಾರಾಲಿಂಪಿಯನ್ ಫರ್ಮಾನ್ ಬಾಷಾ, ಶಿವ ಕುಮಾರ್, ಪ್ರಶಾಂತ್, ಗೌಸ್ ಮತ್ತು ಶಾಹಿನಿ ಅವರು ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

29ರಿಂದ ಹಾಕಿ ಆಯ್ಕೆ ಪ್ರಕ್ರಿಯೆ
ಬೆಂಗಳೂರು
: ಸೋನೆಪತ್‌ನಲ್ಲಿ ಜೂನ್ ಮೂರರಿಂದ ನಡೆಯಲಿರುವ 3ನೇ ಹಾಕಿ ಇಂಡಿಯಾ ಜೂನಿಯರ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ಬಾಲಕರ ತಂಡವನ್ನು ಆಯ್ಕೆ ಮಾಡಲು ಹಾಕಿ ಕರ್ನಾಟಕ 29 ಹಾಗೂ 30ರಂದು ಆಯ್ಕೆ ಪ್ರಕ್ರಿಯೆ ಹಮ್ಮಿಕೊಂಡಿದೆ. ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ಜರುಗಲಿದೆ. ಮಾಹಿತಿಗೆ ದೂರವಾಣಿ: 9448138883 ಇಲ್ಲಿಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.