ADVERTISEMENT

ಚೆಂಡು ವಿರೂಪ ಪ್ರಕರಣದಲ್ಲಿ ದಿನೇಶ್‌

ಏಜೆನ್ಸೀಸ್
Published 17 ಜೂನ್ 2018, 18:36 IST
Last Updated 17 ಜೂನ್ 2018, 18:36 IST
ದಿನೇಶ್‌ ಚಾಂಡಿಮಲ್‌
ದಿನೇಶ್‌ ಚಾಂಡಿಮಲ್‌   

ಗ್ರಾಸ್‌ ಇಸ್ಲೆಟ್‌: ಶ್ರೀಲಂಕಾ ತಂಡದ ನಾಯಕ ದಿನೇಶ್‌ ಚಾಂಡಿಮಲ್‌ ಅವರು ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿದ್ದಾರೆ.

ವೆಸ್ಟ್‌ ಇಂಡೀಸ್‌ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ವೇಳೆ ಚಾಂಡಿಮಲ್‌ ಅವರು ಚೆಂಡು ವಿರೂಪಗೊಳಿಸಲು ಪ್ರಯತ್ನಿಸಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಐಸಿಸಿ ಭಾನುವಾರ ಟ್ವೀಟ್‌ ಮಾಡಿದೆ.

ಶುಕ್ರವಾರದ ದಿನದಾಟದ ವೇಳೆ ಶ್ರೀಲಂಕಾದ ಆಟಗಾರರು ಚೆಂಡು ವಿರೂಪಗೊಳಿಸಿರಬಹುದು ಎಂದು ಅಂಗಳದ ಅಂಪೈರ್‌ಗಳಾದ ಇಯಾನ್ ಗೌಲ್ಡ್‌ ಮತ್ತು ಅಲೀಮ್‌ ದಾರ್‌ ಸಂದೇಹ ವ್ಯಕ್ತಪಡಿಸಿದ್ದರು. ಈ ಸಂಬಂಧ ಅವರು ಪಂದ್ಯದ ರೆಫರಿ ಜಾವಗಲ್‌ ಶ್ರೀನಾಥ್‌ಗೆ ದೂರು ನೀಡಿದ್ದರು. ಇದನ್ನು ಪರಿಶೀಲಿಸಿದ್ದ ಶ್ರೀನಾಥ್‌, ಲಂಕಾ ತಂಡದಿಂದ ತಪ್ಪಾಗಿರುವುದು ಖಚಿತವಾದ ನಂತರ ವೆಸ್ಟ್‌ ಇಂಡೀಸ್‌ ತಂಡಕ್ಕೆ ಹೆಚ್ಚುವರಿಯಾಗಿ 5ರನ್‌ ನೀಡಿದ್ದರು.

ADVERTISEMENT

ಶ್ರೀನಾಥ್‌ ಅವರ ನಿರ್ಧಾರವನ್ನು ವಿರೋಧಿಸಿದ್ದ ಶ್ರೀಲಂಕಾದ ಆಟಗಾರರು ಶನಿವಾರ ಬೆಳಿಗ್ಗೆ ಅಂಗಳಕ್ಕಿಳಿಯಲಿಲ್ಲ. ಈ ಸಂಬಂಧ ಶ್ರೀನಾಥ್‌ ಅವರು ಲಂಕಾ ತಂಡದ ಕೋಚ್‌ ಚಂದಿಕಾ ಹತುರಸಿಂಘೆ ಮತ್ತು ವ್ಯವಸ್ಥಾಪಕ ಗುರುಸಿನ್ಹಾ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಆಟಗಾರರು ಮೈದಾನಕ್ಕಿಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.