ADVERTISEMENT

ಚೆಂಡು ವಿರೂಪ ಪ್ರಕರಣ: ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಡೇವಿಡ್‌ ವಾರ್ನರ್‌

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 5:55 IST
Last Updated 29 ಮಾರ್ಚ್ 2018, 5:55 IST
ಚೆಂಡು ವಿರೂಪ ಪ್ರಕರಣ: ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಡೇವಿಡ್‌ ವಾರ್ನರ್‌
ಚೆಂಡು ವಿರೂಪ ಪ್ರಕರಣ: ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಡೇವಿಡ್‌ ವಾರ್ನರ್‌   

ಬೆಂಗಳೂರು: ಚೆಂಡು ವಿರೂಪಗೊಳಿಸಿದ ಪ್ರಕರಣದಿಂದಾಗಿ ಈ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಚೆಂಡು ವಿರೂಪಗೊಳಿಸಿರುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮೌನ ಮುರಿದಿರುವ ವಾರ್ನರ್‌, ‘ನನ್ನ ಪಾಲಿನ ತಪ್ಪಿಗೆ ಕ್ಷಮೆಯಾಚಿಸುತ್ತೇನೆ ಹಾಗೂ ಅದರ ಹೊಣೆಯನ್ನು ತೆಗೆದುಕೊಳ್ಳುತ್ತೇನೆ’ ಎಂದು ಅಭಿಮಾನಿಗಳನ್ನು ಉದ್ದೇಶಿಸಿ ಬರೆದುಕೊಂಡಿದ್ದಾರೆ.

‘ತಪ್ಪಿನಿಂದಾಗಿ ಕ್ರೀಡೆ ಮತ್ತು ಅಭಿಮಾನಿಗಳಿಗೆ ಉಂಟು ಮಾಡಿರುವ ಆಘಾತವನ್ನು ನಾನು ಬಲ್ಲೆ. ನಾವೆಲ್ಲರೂ ಪ್ರೀತಿಸುವ ಹಾಗೂ ನಾನು ಚಿಕ್ಕಂದಿನಿಂದಲೂ ಬಹಳ ಇಷ್ಟಪಡುವ ಕ್ರಿಕೆಟ್‌ ಆಟದ ಮೇಲೆ ಇದೊಂದು ಕಲೆಯುಂಟು ಮಾಡಿದಂತೆ. ನಾನೀಗ ಕೆಲ ಕಾಲ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕಳೆಯಲು ಬಯಸುತ್ತಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ನನ್ನ ಮಾತುಗಳನ್ನು ಆಲಿಸಲಿದ್ದೀರಿ’ ಎಂದು ಗುರುವಾರ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT