ADVERTISEMENT

ಚೆಸ್: ಪರಿಮಾರ್ಜನ್ ನೇಗಿಗೆ ಜಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ಲೀಡನ್, ಹಾಲೆಂಡ್ (ಪಿಟಿಐ): ಗ್ರ್ಯಾಂಡ್‌ಮಾಸ್ಟರ್ ಹಾಗೂ ಏಷ್ಯನ್ ಚಾಂಪಿಯನ್ ಭಾರತದ ಪರಿಮಾರ್ಜನ ನೇಗಿ ಇಲ್ಲಿ ನಡೆಯುತ್ತಿರುವ ಲೀಡನ್ ಅಂತರರಾಷ್ಟ್ರೀಯ ಚೆಸ್ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಹಾಲೆಂಡ್‌ನ ತಿಜಿಸ್ ರೂರ್ಡಾ ಎದುರು ಗೆಲುವು ಸಾಧಿಸಿದರು.

ಎರಡನೇ ಸುತ್ತಿನ ಪಂದ್ಯ ಡ್ರಾ ಆಗಿದ್ದ ಕಾರಣ ಹಿನ್ನಡೆ ಹೊಂದಿದ್ದ ಅವರು ಸೋಮವಾರ ಪೂರ್ಣ ಪಾಯಿಂಟ್ ಕಲೆಹಾಕಿದರು. ಇದರೊಂದಿಗೆ ಅವರು ಒಟ್ಟು 2.5 ಪಾಯಿಂಟ್ ಹೊಂದಿದ್ದಾರೆ. ಇನ್ನೂ ಆರು ಸುತ್ತಿನ ಪಂದ್ಯ ಬಾಕಿ ಉಳಿದಿದ್ದು, ನೇಗಿ ಜಂಟಿ 4ನೇ ಸ್ಥಾನಕ್ಕೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.