ADVERTISEMENT

ಚೆಸ್‌: ವಿಶ್ವನಾಥ್‌ ಆನಂದ್‌ಗೆ ಅಗ್ನಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ವಿಶ್ವನಾಥನ್‌ ಆನಂದ್‌
ವಿಶ್ವನಾಥನ್‌ ಆನಂದ್‌   

ಸ್ಟಾವೆಂಜರ್‌, ನಾರ್ವೆ: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಅವರು ಮಂಗಳವಾರದಿಂದ ಆರಂಭವಾಗುವ ಅಲ್ಟಿಬಾಕ್ಸ್‌ ನಾರ್ವೆ ಚೆಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

47 ವರ್ಷದ ಆನಂದ್‌ ಅವರು ಟೂರ್ನಿಯಲ್ಲಿ ಆಡುತ್ತಿರುವ ಹಿರಿಯ ಆಟಗಾರ ಎನಿಸಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದಿರುವ ಅವರು ಟೂರ್ನಿಯಲ್ಲಿ ಏಳನೇ ಕ್ರಮಾಂಕ ಹೊಂದಿದ್ದಾರೆ. ನೆದರ್ಲೆಂಡ್ಸ್‌ನ ಅನಿಶ್‌ ಗಿರಿ (22 ವರ್ಷ) ಅವರು ಕಣದಲ್ಲಿರುವ ಕಿರಿಯ ಆಟಗಾರನಾಗಿದ್ದಾರೆ.

ಚೆನ್ನೈನ ಆನಂದ್‌ ಅವರು ಮೂರನೇ ಬಾರಿ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಐದು ತಿಂಗಳ ನಂತರ ಕ್ಲಾಸಿಕ್‌ ಮಾದರಿಯಲ್ಲಿ ಆಡುತ್ತಿದ್ದಾರೆ. ಏಪ್ರಿಲ್‌ನಲ್ಲಿ ನಡೆದಿದ್ದ ಜ್ಯೂರಿಚ್‌ ಚೆಸ್‌ ಚಾಲೆಂಜ್‌ನಲ್ಲಿ ಮೂರನೇ ಸ್ಥಾನ ಗಳಿಸಿದ್ದ ಆನಂದ್‌ ಅವರಿಗೆ ಈ ಟೂರ್ನಿ ಯಲ್ಲಿ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.