ADVERTISEMENT

ಜಡೇಜ ಸಾಧನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ರಾಜ್‌ಕೋಟ್ (ಪಿಟಿಐ): ಸೌರಾಷ್ಟ್ರ ತಂಡದ ರವೀಂದ್ರ ಜಡೇಜ ಇಲ್ಲಿ ನಡೆಯುತ್ತಿರುವ ರೈಲ್ವೆಸ್ ವಿರುದ್ಧದ ರಣಜಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ  ತ್ರಿಶತಕ ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಸೌರಾಷ್ಟ್ರ ಎರಡನೇ ದಿನವಾದ ಭಾನುವಾರದ ಅಂತ್ಯಕ್ಕೆ 180 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 534 ರನ್ ಗಳಿಸಿದೆ. ಇದೇ ಋತುವಿನಲ್ಲಿ ಗುಜರಾತ್ ವಿರುದ್ಧ ತ್ರಿಶತಕ (303) ಗಳಿಸಿದ್ದ ಜಡೇಜ ರೈಲ್ವೆಸ್ (ಬ್ಯಾಟಿಂಗ್ 320, 491 ಎಸೆತ, 28 ಬೌಂಡರಿ, 7 ಸಿಕ್ಸರ್) ವಿರುದ್ಧವೂ ಗುಡುಗಿದರು.

ಸಾಧನೆ: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೂರು ತ್ರಿಶತಕ ಗಳಿಸಿದ ಭಾರತದ ಏಕೈಕ ಆಟಗಾರ ಎನ್ನುವ ಕೀರ್ತಿಯನ್ನು ಜಡೇಜ ಪಡೆದರು. ವಿವಿಎಸ್ ಲಕ್ಷ್ಮಣ್ ಹಾಗೂ ವಾಸೀಮ್ ಜಾಫರ್ ತಲಾ ಎರಡು ತ್ರಿಶತಕ ಗಳಿಸಿದ್ದರು. ಕಳೆದ ವರ್ಷ ಒಡಿಶಾ ವಿರುದ್ಧ  ಜಡೇಜ ಚೊಚ್ಚಲ ತ್ರಿಶತಕ (314) ದಾಖಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.