ADVERTISEMENT

ಜಿಆರ್‌ವಿ ‘ಪ್ರಥಮ’ ಪಂದ್ಯಕ್ಕೆ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 19:30 IST
Last Updated 10 ನವೆಂಬರ್ 2017, 19:30 IST
ಜಿಆರ್‌ವಿ ‘ಪ್ರಥಮ’ ಪಂದ್ಯಕ್ಕೆ ಅರ್ಧಶತಕ
ಜಿಆರ್‌ವಿ ‘ಪ್ರಥಮ’ ಪಂದ್ಯಕ್ಕೆ ಅರ್ಧಶತಕ   

ಕ್ರಿಕೆಟ್‌ ಕ್ಷಿತಿಜದ ಮಿನುಗು ತಾರೆಗಳಲ್ಲಿ ಕರ್ನಾಟಕದ ಜಿ.ಆರ್‌.ವಿಶ್ವನಾಥ್‌ ಕೂಡ ಒಬ್ಬರು. 70 ಮತ್ತು 80ರ ದಶಕಗಳಲ್ಲಿ ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನರಾಗಿದ್ದ ಜಿಆರ್‌ವಿ, ಸಾಗಿದ ಹಾದಿಯಲ್ಲೆಲ್ಲಾ ಸಾಧನೆಯ ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ.

ಅವರು ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಡಿ ಇಟ್ಟು ಶನಿವಾರಕ್ಕೆ (ನವೆಂಬರ್‌ 11) 50 ವರ್ಷ ತುಂಬಲಿದೆ. 1967ರ ನವೆಂಬರ್‌ 11ರಂದು ಮೊದಲ ಪಂದ್ಯ ಆಡಿದ್ದ ವಿಶ್ವನಾಥ್‌ ರಣಜಿ ಟ್ರೋಫಿಯಲ್ಲಿ ಆಂಧ್ರ ವಿರುದ್ಧ ಪದಾರ್ಪಣೆ ಪಂದ್ಯದಲ್ಲೇ 230 ರನ್‌ ಗಳಿಸಿದ್ದರು. ಈ ಮೂಲಕ ಜಾರ್ಜ್‌ ಅಬೆಲ್‌ (210 ರನ್‌) ದಾಖಲೆ ಅಳಿಸಿ ಹಾಕಿದ್ದರು. ಏಕದಿನ ಮತ್ತು ಟಿ–20 ಮಾದರಿಗಳಲ್ಲಿ ಭಾರತ ತಂಡದ ಪರ ಆಡಿದ್ದ ‘ವಿಶಿ’ ನಾಯಕನಾಗಿಯೂ ಅಭಿಮಾನಿಗಳ ಮನ ಗೆದ್ದಿದ್ದರು.

‘ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿ 50 ವರ್ಷಗಳು ತುಂಬಿದೆ ಎಂದರೆ ನಂಬಲಾಗುತ್ತಿಲ್ಲ. ಈ ಕ್ಷಣವನ್ನು ಕಣ್ತುಂಬಿಕೊಳ್ಳುತ್ತಿರುವುದು ನಿಜಕ್ಕೂ ಅದೃಷ್ಟ. ಮೊದಲ ಪಂದ್ಯದ ನೆನಪು ಇನ್ನೂ ಹಸಿರಾಗಿಯೇ ಇದೆ‘
ಜಿ.ಆರ್‌.ವಿಶ್ವನಾಥ್‌
ಹಿರಿಯ ಕ್ರಿಕೆಟಿಗ

ADVERTISEMENT

ಪರಿಚಯ
ಪೂರ್ಣ ಹೆಸರು: ಗುಂಡಪ್ಪ ರಂಗನಾಥ್‌ ವಿಶ್ವನಾಥ್‌
ಜನನ: 12 ಫೆಬ್ರುವರಿ 1949
ವಯಸ್ಸು: 68
ಸ್ಥಳ: ಭದ್ರಾವತಿ, ಶಿವಮೊಗ್ಗ ಜಿಲ್ಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.