ADVERTISEMENT

ಜಿಮ್ನಾಸ್ಟಿಕ್ಸ್: ಏಕಸ್ವಾಮ್ಯ ಮೆರೆದ ಉಜ್ವಲ್ ನಾಯ್ಡು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2010, 11:15 IST
Last Updated 19 ಡಿಸೆಂಬರ್ 2010, 11:15 IST

ಧಾರವಾಡ:  ಆತಿಥೇಯ ತಂಡದ ಸಿದ್ಧಾರೂಢ ಕೈನಡಗು ಹಾಗೂ ನಾಗವೇಣಿ ಕಡಗದ ಶನಿವಾರ ಇಲ್ಲಿಯ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಆರಂಭವಾದ ರಾಜ್ಯಮಟ್ಟದ ಜಿಮ್ನಾಸ್ಟಿಕ್ಸ್ ಸ್ಪರ್ಧೆಯ ಹತ್ತು ವರ್ಷದೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬಾಲಕ-ಬಾಲಕಿಯರ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಟೇಬಲ್ ವಾಲ್ಟ್ ಮತ್ತು ಫ್ಲೋರ್ ಎಕ್ಸರ್‌ಸೈಜ್ ವಿಭಾಗ ಎರಡರಲ್ಲೂ ಸಿದ್ಧಾರೂಢ ಕೈನಡಗು ಮೊದಲಿಗರಾದರು. ಬಾಲಕಿಯರ ವಿಭಾಗದಲ್ಲಿ ಫ್ಲೋರ್ ಎಕ್ಸರ್‌ಸೈಜ್‌ನಲ್ಲಿ ಮೊದಲ ಸ್ಥಾನ ಗಳಿಸಿದ ನಾಗವೇಣಿ ಕಡಗದ, ಟೇಬಲ್ ವಾಲ್ಟ್ ಮತ್ತು ಬೀಮ್‌ನಲ್ಲಿ ದ್ವಿತೀಯ ಸ್ಥಾನ ಪಡೆದರು. ಹನ್ನೆರಡು ವರ್ಷದೊಳಗಿನವರ ವಿಭಾಗದಲ್ಲಿ ತಾವಾಡಿದ ಎಲ್ಲ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಗಳಿಸಿದ ಬೆಂಗಳೂರಿನ ಉಜ್ವಲ್ ನಾಯ್ಡು ಚಾಂಪಿಯನ್ ಎನಿಸಿದರು.

ಫಲಿತಾಂಶ:
ಹತ್ತು ವರ್ಷದೊಳಗಿನ ಬಾಲಕರು:
ಟೇಬಲ್ ವಾಲ್ಟ್: ಸಿದ್ಧಾರೂಢ ಕೈನಡಗು-1, ಅಮೃತ ಮುದ್ರಾಬೆಟ್-2, ಮೆಹಬೂಬ್ ಹಂಚಿನಾಳ  (ಮೂವರೂ ಧಾರವಾಡ)-3, ಪಾಯಿಂಟ್: 16.45, ಫ್ಲೋರ್ ಎಕ್ಸರ್‌ಸೈಜ್: ಸಿದ್ಧಾರೂಢ ಕೈನಡಗು-1, ಅಮೃತ ಮುದ್ರಾಬೆಟ್-2, ಶಶಿಧರ ಗುಡಗೂರು (ಮೂವರೂ ಧಾರವಾಡ)-3, ಪಾಯಿಂಟ್: 15.90, ವೈಯಕ್ತಿಕ ಚಾಂಪಿಯನ್‌ಷಿಪ್: ಸಿದ್ಧಾರೂಢ ಕೈನಡಗು-1, ಅಮೃತ ಮುದ್ರಾಬೆಟ್-2, ಶಶಿಧರ ಗುಡಗೂರು (ಮೂವರೂ ಧಾರವಾಡ)-3, ಪಾಯಿಂಟ್: 31.35.

12 ವರ್ಷದೊಳಗಿನ ಬಾಲಕರು:
ಪಾಮೆಲ್ ಹಾರ್ಸ್: ಉಜ್ವಲ್ ನಾಯ್ಡು (ಬೆಂಗಳೂರು)-1, ಪ್ರಜ್ವಲ್ ಕೋಲಾರ (ಧಾರವಾಡ)-2, ಎಸ್.ವಿದ್ವತ್ (ಮೈಸೂರು)-3, ಪಾಯಿಂಟ್: 10.10, ಫ್ಲೋರ್ ಎಕ್ಸರ್‌ಸೈಜ್: ಉಜ್ವಲ್ ನಾಯ್ಡು (ಬೆಂಗಳೂರು)-1, ಎಸ್.ವಿದ್ವತ್ (ಮೈಸೂರು)-2, ಕೈಲಾಶ ಕಟ್ಟಿಶೆಟ್ಟಿ (ಧಾರವಾಡ)-3, ಪಾಯಿಂಟ್: 15.65, ರಿಂಗ್ಸ್: ಪ್ರಜ್ವಲ್ ಕೋಲಾರ (ಧಾರವಾಡ)-1, ಕೈಲಾಶ ಕಟ್ಟಿಶೆಟ್ಟಿ (ಧಾರವಾಡ)-2, ಉಜ್ವಲ್ ನಾಯ್ಡು (ಬೆಂಗಳೂರು)-3, ಪಾಯಿಂಟ್: 13.25.
ಟೇಬಲ್ ವಾಲ್ಟ್: ಉಜ್ವಲ್ ನಾಯ್ಡು (ಬೆಂಗಳೂರು)-1, ಎಸ್.ವಿದ್ವತ್ (ಮೈಸೂರು)-2, ಪ್ರಜ್ವಲ್ ಕೋಲಾರ (ಧಾರವಾಡ)-3, ಪಾಯಿಂಟ್: 14.90, ಪ್ಯಾರಲಲ್ ಬಾರ್: ಉಜ್ವಲ್ ನಾಯ್ಡು (ಬೆಂಗಳೂರು)-1, ಪ್ರಜ್ವಲ್ ಕೋಲಾರ (ಧಾರವಾಡ)-2, ಎಸ್.ವಿದ್ವತ್ (ಮೈಸೂರು)-3,, ಪಾಯಿಂಟ್: 14.85, ಹೈಬಾರ್: ಉಜ್ವಲ್ ನಾಯ್ಡು (ಬೆಂಗಳೂರು)-1, ಪ್ರಜ್ವಲ್ ಕೋಲಾರ (ಧಾರವಾಡ)-2, ಎಸ್.ವಿದ್ವತ್ (ಮೈಸೂರು)-3, ಪಾಯಿಂಟ್: 11.25, ವೈಯಕ್ತಿಕ ಚಾಂಪಿಯನ್‌ಷಿಪ್: ಉಜ್ವಲ್ ನಾಯ್ಡು (ಬೆಂಗಳೂರು)-1, ಪ್ರಜ್ವಲ್ ಕೋಲಾರ (ಧಾರವಾಡ)-2, ಎಸ್.ವಿದ್ವತ್ (ಮೈಸೂರು)-3, ಪಾಯಿಂಟ್: 76.95.

ಬಾಲಕಿಯರು: 10 ವರ್ಷದೊಳಗಿನವರು:
ಬೀಮ್: ಲಕ್ಷ್ಮಿ ದೇಸಾಯಿ-1, ನಾಗವೇಣಿ ಕಡಗದ-2, ಮೇಘಾ ಚವಾಣ್ (ಮೂವರೂ ಧಾರವಾಡ)-3, ಪಾಯಿಂಟ್: 8.50 ಟೇಬಲ್ ವಾಲ್ಟ್: ಅಕ್ಷತಾ ಕುಲಕರ್ಣಿ-1, ನಾಗವೇಣಿ ಕಡಗದ-2, ಅಂಕಿತಾ ಕುಲಕರ್ಣಿ (ಮೂವರೂ ಧಾರವಾಡ)-3, ಪಾಯಿಂಟ್: 13.05, ಫ್ಲೋರ್ ಎಕ್ಸರ್‌ಸೈಜ್: ನಾಗವೇಣಿ ಕಡಗದ-1, ಲಕ್ಷ್ಮಿ ದೇಸಾಯಿ-2, ಅಂಕಿತಾ ಕುಲಕರ್ಣಿ (ಮೂವರೂ ಧಾರವಾಡ)-3, ಪಾಯಿಂಟ್: 10.70, ವೈಯಕ್ತಿಕ ಚಾಂಪಿಯನ್‌ಷಿಪ್: ನಾಗವೇಣಿ ಕಡಗದ-1, ಲಕ್ಷ್ಮಿ ದೇಸಾಯಿ-2, ಅಂಕಿತಾ ಕುಲಕರ್ಣಿ (ಮೂವರೂ ಧಾರವಾಡ)-3, 31.10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.