ADVERTISEMENT

ಜೆಐಪಿಎಲ್‌ ಅನಧಿಕೃತ

ಪಿಟಿಐ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ಗೌತಮ್ ಗಂಭೀರ್‌
ಗೌತಮ್ ಗಂಭೀರ್‌   

ನವದೆಹಲಿ: ಐಜೆಪಿಎಲ್‌ ಮತ್ತು ಜೆಐಪಿಎಲ್‌ನಂಥ ಕ್ರಿಕೆಟ್ ಲೀಗ್‌ಗಳಲ್ಲಿ ಪಾಲ್ಗೊಳ್ಳದಂತೆ ಆಟಗಾರರಿಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತಾಕೀತು ಮಾಡಿದೆ. ಈ ಟೂರ್ನಿಗಳನ್ನು ಅನಧಿಕೃತ ಎಂದು ಕರೆದಿರುವ ಮಂಡಳಿ ಇವುಗಳಲ್ಲಿ ಆಡು ವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಈ ವರ್ಷದ ಇಂಡಿಯನ್ ಜೂನಿಯರ್‌ ಪ್ಲೇಯರ್ಸ್ ಲೀಗ್‌ ಕಳೆದ ತಿಂಗಳು ದುಬೈನಲ್ಲಿ ನಡೆದಿತ್ತು. ಈ ಟೂರ್ನಿಗೆ ಪ್ರೋತ್ಸಾಹ ನೀಡಿದ್ದ ಭಾರತ ತಂಡದ ಆಟಗಾರ ಗೌತಮ್ ಗಂಭೀರ್‌ ತಮ್ಮ ಬೆಂಬಲವನ್ನು ವಾಪಸ್ ತೆಗೆದುಕೊಂಡಿದ್ದಾರೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

‌‘ಇಂಡಿಯನ್ ಜೂನಿಯರ್ ಪ್ಲೇಯರ್ಸ್ ಲೀಗ್‌ ಮತ್ತು ಜೂನಿಯರ್ ಇಂಡಿಯನ್‌ ಪ್ಲೇಯರ್ ಲೀಗ್ ಹೆಸರು ಗಳಲ್ಲಿ ಲೀಗ್‌ಗಳು, ಟೂರ್ನಿಗಳು ಮತ್ತು ತರಬೇತಿ ಶಿಬಿರಗಳನ್ನು ನಡೆಸುತ್ತಿರುವುದು ಮಂಡಳಿಯ ಗಮನಕ್ಕೆ ಬಂದಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.