ADVERTISEMENT

ಟೆನಿಸ್‌: ಫೈನಲ್‌ಗೆ ರೋಹನ್‌- –ಐಸಾಮ್‌

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 19:30 IST
Last Updated 10 ಜನವರಿ 2014, 19:30 IST

ಸಿಡ್ನಿ (ಐಎಎನ್‌ಎಸ್‌): ಹೊಂದಾಣಿ ಕೆಯ ಆಟವಾಡಿದ ರೋಹನ್‌ ಬೋಪಣ್ಣ ಮತ್ತು ಐಸಾಮ್‌ ಉಲ್‌ ಹಕ್‌ ಖುರೇಷಿ ಜೋಡಿ ಇಲ್ಲಿ ನಡೆಯು ತ್ತಿರುವ ಸಿಡ್ನಿ ಇಂಟರ್‌ನ್ಯಾಷನಲ್‌ ಟೆನಿ ಸ್‌ ಟೂರ್ನಿಯ ಫೈನಲ್‌ ಪ್ರವೇಶಿಸಿತು.

ಕೆನ್‌ ರೋಸ್‌ವೆಲ್‌ ಅರೆನಾದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ- ಪಾಕಿಸ್ತಾನ ಜೋಡಿ 6–1, 6–2 ರಲ್ಲಿ ಲೂಕಾಸ್‌ ರಸೋಲ್‌ ಮತ್ತು ಜಾವೊ ಸೋಸಾ ವಿರುದ್ಧ ಸುಲಭ ಗೆಲುವು ಪಡೆಯಿತು.

ರೋಹನ್‌ ಮತ್ತು ಐಸಾಮ್‌ ಶನಿವಾರ ನಡೆಯುವ ಫೈನಲ್‌ನಲ್ಲಿ ಕೆನಡಾದ ಡೇನಿಯಲ್‌ ನೆಸ್ಟರ್‌ ಮತ್ತು ಸರ್ಬಿಯದ ನೆನಾದ್‌ ಜಿಮೋಂಜಿಕ್‌ ಅವರ ಸವಾಲನ್ನು ಎದುರಿಸುವರು.

ದಿನದ ಮತ್ತೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ನೆಸ್ಟರ್‌ ಮತ್ತು ಜಿಮೋಂಜಿಕ್‌ 4-6, 7–6, 10-5 ರಲ್ಲಿ ಫ್ರಾನ್ಸ್‌ನ ಜೂಲಿಯನ್‌ ಬೆನೆಟು ಮತ್ತು ಎಡ್ವರ್ಡ್‌ ರೋಜರ್‌ ವಸೆಲಿನ್‌ ವಿರುದ್ಧ ಗೆದ್ದರು.

ಮೂರನೇ ಶ್ರೇಯಾಂಕ ಹೊಂದಿರುವ ಬೋಪಣ್ಣ ಮತ್ತು ಐಸಾಮ್‌ ಎದುರಾಳಿಗಳ ಮೇಲೆ ಪೂರ್ಣ ಪ್ರಭುತ್ವ ಸಾಧಿಸಿದರಲ್ಲದೆ, ಕೇವಲ 44 ನಿಮಿಷಗಳಲ್ಲಿ ಪಂದ್ಯ ತಮ್ಮದಾಗಿಸಿಕೊಂಡರು.

ಸ್ವೆಟಾನಾ ಚಾಂಪಿಯನ್‌: ಬಲ್ಗೇರಿ ಯದ ಸ್ವೆಟಾನಾ ಪಿರೊಂಕೋವಾ ಇದೇ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.
ಶುಕ್ರವಾರ ನಡೆದ ಫೈನಲ್‌ನಲ್ಲಿ ಸ್ವೆಟಾನಾ 6-4, 6-4 ರಲ್ಲಿ ಜರ್ಮನಿಯ ಏಂಜೆಲಿಕ್‌ ಕೆರ್ಬರ್‌ ವಿರುದ್ಧ ಗೆಲುವು ಪಡೆದರು. ಸ್ವೆಟಾನಾಗೆ ಒಲಿದ ಮೊದಲ ಡಬ್ಲ್ಯುಟಿಎ ಪ್ರಶಸ್ತಿ ಇದಾಗಿದೆ.

ಫೈನಲ್‌ಗೆ ಪೊಟ್ರೊ: ಅರ್ಜೆಂಟೀ ನಾದ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಪ್ರವೇಶಿಸಿದರು. ವಿಶ್ವದ ಐದನೇ ರ್‍ಯಾಂಕ್‌ನ ಆಟಗಾರ ಪೊಟ್ರೊ ಸೆಮಿಫೈನ ಲ್‌ನಲ್ಲಿ 6–-4, 6–-2 ರಲ್ಲಿ ರಷ್ಯಾದ ದಿಮಿತ್ರಿ ತುರ್ಸುನೊವ್‌ ವಿರುದ್ಧ ಗೆದ್ದರು.

ಶನಿವಾರ ನಡೆಯುವ ಫೈನಲ್‌ನಲ್ಲಿ ಅವರು ಆಸ್ಟ್ರೇಲಿಯಾದ ಬರ್ನಾರ್ಡ್‌ ಟೊಮಿಕ್‌ ವಿರುದ್ಧ ಪೈಪೋಟಿ ನಡೆಸುವರು. ಟೊಮಿಕ್‌ 6-–7, 7-–5, 6-–3 ರಲ್ಲಿ ಉಕ್ರೇನ್‌ನ ಸೆರ್ಜಿ ಸ್ಟಕೋವ್‌ಸ್ಕಿ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.