ADVERTISEMENT

ಟೆನಿಸ್‌: ಫೆಡರರ್‌ಗೆ ಪ್ರಶಸ್ತಿ

ಏಜೆನ್ಸೀಸ್
Published 17 ಜೂನ್ 2018, 18:11 IST
Last Updated 17 ಜೂನ್ 2018, 18:11 IST
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ರೋಜರ್‌ ಫೆಡರರ್‌ -ರಾಯಿಟರ್ಸ್‌ ಚಿತ್ರ
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ರೋಜರ್‌ ಫೆಡರರ್‌ -ರಾಯಿಟರ್ಸ್‌ ಚಿತ್ರ   

ಸ್ಟಟ್‌ಗರ್ಟ್‌, ಜರ್ಮನಿ: ಅಮೋಘ ಆಟ ಆಡಿದ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌, ಸ್ಟಟ್‌ಗರ್ಟ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಫೆಡರರ್ 6–4, 7–6ರ ನೇರ ಸೆಟ್‌ಗಳಿಂದ ಕೆನಡಾದ ಮಿಲೊಸ್‌ ರಾವನಿಕ್‌ ಅವರನ್ನು ಸೋಲಿಸಿದರು. ಈ ಮೂಲಕ ವೃತ್ತಿಬದುಕಿನಲ್ಲಿ 98 ಎಟಿಪಿ ಪ್ರಶಸ್ತಿಗಳನ್ನು ಗೆದ್ದ ಹೆಗ್ಗಳಿಕೆಗೆ ಪಾತ್ರರಾದರು.

ರಾವನಿಕ್‌ ವಿರುದ್ಧ 10–3ರ ಗೆಲು ವಿನ ದಾಖಲೆ ಹೊಂದಿದ್ದ ರೋಜರ್‌, ಮೊದಲ ಸೆಟ್‌ನ ಆರಂಭದಿಂದಲೇ ಮಿಂಚಿದರು. ಶರವೇಗದ ಸರ್ವ್‌ಗಳನ್ನು ಸಿಡಿಸಿದ ಅವರು ಗ್ರೌಂಡ್‌ಸ್ಟ್ರೋಕ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ADVERTISEMENT

ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಫೆಡರರ್‌, ಎರಡನೇ ಸೆಟ್‌ನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ‘ಟೈ ಬ್ರೇಕರ್‌’ನಲ್ಲಿ ಮೋಡಿ ಮಾಡಿದ ಅವರು ಖುಷಿಯ ಕಡಲಲ್ಲಿ ತೇಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.