ADVERTISEMENT

ಟೆನಿಸ್: ರೋಹನ್- ಐಸಾಮ್ ಜೋಡಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ಸ್ಟಾಕ್‌ಹೋಮ್ (ಪಿಟಿಐ): ರೋಹನ್ ಬೋಪಣ್ಣ ಮತ್ತು ಐಸಾಮ್ ಉಲ್ ಹಕ್ ಖುರೇಷಿ ಜೋಡಿ ಸ್ಟಾಕ್‌ಹೋಮ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಭಾನುವಾರ ನಡೆದ ಫೈನಲ್‌ನಲ್ಲಿ ಭಾರತ- ಪಾಕಿಸ್ತಾನದ ಜೋಡಿ 6-1, 6-4 ರಲ್ಲಿ ಬ್ರೆಜಿಲ್‌ನ ಮಾರ್ಸೆಲೊ ಮೆಲೊ ಮತ್ತು ಬ್ರೂನೊ ಸೊರೇಜ್ ವಿರುದ್ಧ ಜಯ ಸಾಧಿಸಿತು. ಹೊಂದಾಣಿಕೆಯ ಪ್ರದರ್ಶನ ನೀಡಿದ ರೋಹನ್ ಮತ್ತು ಐಸಾಮ್ 57 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು.

ಭಾರತ-ಪಾಕಿಸ್ತಾನದ ಆಟಗಾರರು ಜೊತೆಯಾಗಿ ಪಡೆದ ಮೂರನೇ ಎಟಿಪಿ ಡಬಲ್ಸ್ ಪ್ರಶಸ್ತಿ ಇದು. ಅದೇ ರೀತಿ ಪ್ರಸಕ್ತ ಋತುವಿನಲ್ಲಿ ಇವರಿಗೆ ದೊರೆತ ಎರಡನೇ ಪ್ರಶಸ್ತಿ ಇದಾಗಿದೆ. ಈ ಹಿಂದೆ ಇವರಿಬ್ಬರು ಹಾಲೆ ಮಾಸ್ಟರ್ಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಅದಕ್ಕೂ ಮೊದಲು 2010 ರಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು.

ಕೊಡಗಿನ ಆಟಗಾರ ರೋಹನ್‌ಗೆ ದೊರೆತ ವೃತ್ತಿಜೀವನದ ನಾಲ್ಕನೇ ಎಟಿಪಿ ಡಬಲ್ಸ್ ಇದಾಗಿದೆ. 2008 ರಲ್ಲಿ ಅವರು ಅಮೆರಿಕದ ಎರಿಕ್ ಬಟೊರಾಕ್ ಜೊತೆ ಸೇರಿಕೊಂಡು ಲಾಸ್ ಏಂಜಲೀಸ್‌ನಲ್ಲಿ ನಡೆದ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.