ADVERTISEMENT

ಟೆನ್‌ಪಿನ್‌ ಬೌಲಿಂಗ್‌: ವಿಜಯ್ ಉತ್ತಮ ಹೋರಾಟ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 19:30 IST
Last Updated 13 ಡಿಸೆಂಬರ್ 2013, 19:30 IST

ಬೆಂಗಳೂರು: ಮಾಜಿ ರಾಷ್ಟ್ರೀಯ ಚಾಂಪಿಯನ್‌ ಕರ್ನಾಟಕದ ವಿಜಯ್‌ ಪಂಜಾಬಿ 25ನೇ ರಾಷ್ಟ್ರೀಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಉತ್ತಮ ಹೋರಾಟ ತೋರಿದರು.

ಒರಾಯನ್‌ ಮಾಲ್‌ನ ‘ಬ್ಲೂ ಒ’ ಮಾಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜಯ್‌ ಒಟ್ಟು 1331 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿದರು.  ಮೊದಲ ನಾಲ್ಕೂ ಸುತ್ತುಗಳಲ್ಲಿ ಕ್ರಮವಾಗಿ 233, 233, 236 ಮತ್ತು 214 ಪಾಯಿಂಟ್‌ಗಳನ್ನು ಕಲೆ ಹಾಕಿ ತಮ್ಮ ಸ್ಥಾನ ಸುಧಾರಿಸಿಕೊಂಡರು.

ಕರ್ನಾಟಕದ ವರುಣ್‌ ಗಣಪತಿ ನೀರಸ ಆರಂಭ ಪಡೆದರಾದರೂ, ನಂತರದ ಸುತ್ತಿನಲ್ಲಿ ಚುರುಕಿನ ಪ್ರದರ್ಶನ ತೋರಿದರು. ತಮಿಳುನಾಡಿನ ಶಬ್ಬೀರ್ ಧನ್ಕೋಟ್‌ ಅಗ್ರಸ್ಥಾನದಲ್ಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸಬೀನಾ ಹಾಗೂ ಪೂಜಾ ಹೆಗ್ಡೆ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.