ADVERTISEMENT

ಟೆಸ್ಟ್ ಚಾಂಪಿಯನ್‌ಷಿಪ್‌ಗೆ ಒಪ್ಪಿಗೆ

ಏಜೆನ್ಸೀಸ್
Published 13 ಅಕ್ಟೋಬರ್ 2017, 20:05 IST
Last Updated 13 ಅಕ್ಟೋಬರ್ 2017, 20:05 IST
ಟೆಸ್ಟ್ ಚಾಂಪಿಯನ್‌ಷಿಪ್‌ಗೆ ಒಪ್ಪಿಗೆ
ಟೆಸ್ಟ್ ಚಾಂಪಿಯನ್‌ಷಿಪ್‌ಗೆ ಒಪ್ಪಿಗೆ   

ವೆಲಿಂಗ್ಟನ್‌: ಟೆಸ್ಟ್ ಚಾಂಪಿಯನ್‌ಷಿಪ್‌ ಆಯೋಜಿಸುವ ಐಸಿಸಿಯ ಬಹುದಿನಗಳ ಕನಸು ನನ ಸಾಗಿದೆ. ಶುಕ್ರವಾರ ಇಲ್ಲಿ ನಡೆದ ಸಮಿತಿಯ ಆಡಳಿತ ಮಂಡಳಿ ಸಭೆಯಲ್ಲಿ ಚಾಂಪಿಯನ್‌ಷಿಪ್‌ಗೆ ಹಸಿರು ನಿಶಾನೆ ಲಭಿಸಿದೆ. ಏಕದಿನ ಕ್ರಿಕೆಟ್ ಸರಣಿಗಳ ವೇಳಾಪಟ್ಟಿ ಪರಿಷ್ಕರಣೆ ಮತ್ತು ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳ ಆಯೋಜನೆ ಕುರಿತು ಕೂಡ ಸಭೆಯಲ್ಲಿ ಚರ್ಚೆ ನಡೆಯಿತು.

ಟೆಸ್ಟ್ ಚಾಂಪಿಯನ್‌ಷಿಪ್ 2019 ರಲ್ಲಿ ಆರಂಭವಾಗಲಿದ್ದು ಎರಡು ವರ್ಷ ನಡೆಯುವ ಸರಣಿಯಲ್ಲಿ ಒಟ್ಟು ಒಂಬತ್ತು ತಂಡಗಳು ಪಾಲ್ಗೊಳ್ಳಲಿವೆ. ಅಗ್ರ ಸ್ಥಾನ ಗಳಿಸುವ ಎರಡು ತಂಗಳು ಫೈನಲ್ ಪಂದ್ಯದಲ್ಲಿ ಸೆಣಸಲಿವೆ. ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಶ್ರೀಲಂಕಾ, ಬಾಂಗ್ಲಾದೇಶ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿವೆ.

ಟಿ–20 ಕ್ರಿಕೆಟ್‌ ಜನಪ್ರಿಯವಾಗುತ್ತಿರುವ ಕಾರಣ ಟೆಸ್ಟ್ ಪಂದ್ಯಗಳು ಕಳೆಗುಂದುತ್ತಿವೆ ಮತ್ತು ಟಿವಿ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತಿಳಿದು ಈ ಚಾಂಪಿಯನ್‌ಷಿಪ್ ಹಮ್ಮಿ ಕೊಳ್ಳಲು ಐಸಿಸಿ ಕೆಲವು ವರ್ಷಗಳಿಂದ ಪ್ರಯತ್ನ ನಡೆಸುತ್ತಿದೆ.

ADVERTISEMENT

ಈ ಕುರಿತು ಪರಿಶೀಲನೆ ನಡೆಸಲು 1998ರಲ್ಲಿ ಸಮಿತಿಯೊಂದನ್ನು ನಿಯೋಜಿಸಲಾಗಿತ್ತು. ಆದರೆ ಇದರಿಂದ ಕೆಲವು ರಾಷ್ಟ್ರಗಳಿಗೆ ಅನನುಕೂಲ ಆಗಬಹುದು ಎಂಬ ಆತಂಕ ಕಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.