ADVERTISEMENT

ಟ್ವಂಟಿ-ಟ್ವಂಟಿ ವಿಶ್ವಕಪ್ ಟೂರ್ನಿ ಗೆ ಯುವರಾಜ್ ಸಿಂಗ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 9:15 IST
Last Updated 18 ಜುಲೈ 2012, 9:15 IST

 ನವದೆಹಲಿ(ಪಿಟಿಐ):ಸೆಪ್ಟೆಬಂರ್ - ಅಕ್ಟೋಬರ್ ನಲ್ಲಿ ಶ್ರೀಲಂಕದಲ್ಲಿ ನಡೆಯುವ ಟ್ವಂಟಿ-ಟ್ವಂಟಿ ವಿಶ್ವಕಪ್ ಟೂರ್ನಿ ಗೆ  30ಸದಸ್ಯರ ಸಂಭವನಿಯ ಆಟಗಾರರಪಟ್ಟಿ ಬುಧವಾರ  ಪ್ರಕಟ ವಾಗಿದ್ದು  ಜೀವಾಣುಕೋಶ ಕ್ಯಾನ್ಸರ್ ಗೆ ತುತ್ತಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಸುಧಾರಿಸಿಕೊಂಡನಂತರ ಇದೆ ಮೊದಲಬಾರಿಗೆ  ಯುವರಾಜ್ ಸಿಂಗ್ ಅವಕಾಶ ಪಡೆದುಕೊಂಡಿದ್ದಾರೆ.

ಕಳಪೆ ಪಾರ್ಮ್ ನಿಂದ ಬಳಲುತಿದ್ದ  ಅನುಭವಿ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಕೂಡ ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಆಲ್ ರೌಂಡರ್ ಮನ್ ದೀಪ್ ಸಿಂಗ್ ವಿಕೆಟ್ ಕಿಪರ್ ಮತ್ತು ನಮನ್ ಓಜಾ ಸ್ಥಳಿಯ ನುರಿತ ಬ್ಯಾಟ್ಸ್ ಮ್ಯಾನ್ ಅಂಬಟಿ ರಾಯ್ಡು ಯವರನ್ನು ಪಡೆಯಲಾಗಿದೆ ಎಂದು ಬಿಬಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಪ್ರಕಟಿಸಿದರು.

2009ರಲ್ಲಿ ಆಡಿದ್ದ ಬೌಲರ್ ಲಕ್ಷೀಪತಿ ಬಾಲಾಜಿ ಯವರನ್ನು 15 ಸದಸ್ಯರ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ

ADVERTISEMENT

ತಂಡ

 

 

  ಮಹೇಂದ್ರ ಸಿಂಗ್ ದೋನಿ ,ವೀರೇಂದ್ರ ಸೇವಾಗ್,ಗೌತಮ್ ಗಂಬೀರ್ , ವಿರಾಟ್ ಕೋಹ್ಲಿ , ರೋಹಿತ್ ಶರ್ಮ, ಸುರೇಶ್ ರೈನ ,ಆರ್ ಆಶ್ವೀನ್  ಪ್ರಗ್ಯಾನ್ ಓಜಾ , ಉಮೇಶ್ ಯಾದವ್ , ಆಶೋಕ್ ದಿಂಡ , ಅಜಿಂಕ್ಯ ರಹಾನೆ , ಮನೋಜ್ ತಿವಾರಿ , ರಾಹುಲ್ ಶರ್ಮ, ವಿನಯ್ ಕುಮಾರ್ , ಜಾಹೀರ್ ಖಾನ್ , ಯುವರಾಜ್ ಸಿಂಗ್,  ರಾಬಿನ್ ಉತ್ತಪ್ಪ,  ಇರ್ಫಾನ್ ಪಠಾನ್ , ಯುಸುಫ್ ಪಠಾನ್ , ಮಂದೀಪ್ ಸಿಂಗ್ , ಪಿಯೂಸ್ ಚಾವ್ಲಾ, ರವೀಂದ್ರ ಜಡೆಜಾ, ಶಿಖರ್ ದವಾನ್ ,  ಅಂಬಟಿ ರಾಯ್ಡು,  ಹರಭಜನ್ ಸಿಂಗ್  , ಮುನಾಪ್ ಪಟೇಲ್ , ನಮನ್ ಓಜಾ , ಎಲ್ ಬಾಲಾಜಿ, ದಿನೇಶ್ ಕಾರ್ತಿಕ್ , ಪ್ರವೀಣ್ ಕುಮಾರ್

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.