ADVERTISEMENT

ಡಿಆರ್‌ಎಸ್ ಒಂದು ತಮಾಷೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 16:20 IST
Last Updated 8 ಮಾರ್ಚ್ 2011, 16:20 IST

ಕರಾಚಿ (ಪಿಟಿಐ): ‘ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅನುಷ್ಠಾನಕ್ಕೆ ತರಲಾದ ಅಂಪೈರ್ ತೀರ್ಪಿನ ಪುನರ್ ಪರಿಶೀಲನೆ ವ್ಯವಸ್ಥೆ (ಯುಡಿಆರ್‌ಎಸ್)ಯಿಂದ ಈಗಿರುವ ರೂಪದಲ್ಲಿ ಯಾವುದೇ ಪ್ರಯೋಜನವಿಲ್ಲ. ಹಾಲಿ ಈ ವ್ಯವಸ್ಥೆ ಒಂದು ತಮಾಷೆಯಂತೆ ಭಾಸವಾಗುತ್ತಿದೆ’ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ರಷೀದ್ ಲತಿಫ್ ಅಭಿಪ್ರಾಯಪಟ್ಟಿದ್ದಾರೆ.

ಯುಡಿಆರ್‌ಎಸ್‌ನಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್  ಅವರ ಅಭಿಪ್ರಾಯಕ್ಕೆ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ‘ತೀರ್ಪಿನ್ನು ಪುನರ್ ಪರಿಶೀಲಿಸಲು ವ್ಯವಸ್ಥೆಯನ್ನು ಬಳಸುವ ರೀತಿ ಹಾಗೂ ಅಂಪೈರ್ ತೀರ್ಪನ್ನು ಎತ್ತಿ ಹಿಡಿಯುವ ಇಲ್ಲವೆ ರದ್ದುಗೊಳಿಸುವ ಕ್ರಮ ತಮಾಷೆಯಂತಲ್ಲದೆ ಬೇರೆ ರೀತಿಯಲ್ಲಿ ಕಾಣದು’ ಎಂದು ಅವರು ತಿಳಿಸಿದ್ದಾರೆ.

‘ಭಾರತ-ಐರ್ಲೆಂಡ್ ಪಂದ್ಯದ ಉದಾಹರಣೆಯನ್ನೇ ತೆಗೆದುಕೊಂಡರೆ ಐರ್ಲೆಂಡ್ ಬ್ಯಾಟ್ಸ್‌ಮನ್ ಕುಸಾಕ್ ಯುಡಿಆರ್‌ಎಸ್ ಅಡಿಯಲ್ಲಿ ಎಲ್‌ಬಿಡಬ್ಲ್ಯು ಎಂದು ತೀರ್ಪು ನೀಡಲಾಯಿತು. ಆದರೆ, ಅವರು ನಾಟೌಟ್ ಎಂದು ಅಂಪೈರ್ ನೀಡಿದ್ದ ತೀರ್ಪೇ ಸರಿಯಾಗಿತ್ತು. ಏಕೆಂದರೆ ಬ್ಯಾಟ್ಸ್‌ಮನ್ ವಿಕೆಟ್‌ನಿಂದ ಸಾಕಷ್ಟು ಮುಂದೆ ಬಂದಿದ್ದರು. ಬೆಂಗಳೂರಿನ ಪಿಚ್ ಗಣನೆಗೆ ತೆಗೆದುಕೊಂಡೇ ಅಂಪೈರ್ ನಿರ್ಣಯ ಕೊಟ್ಟ್ದಿರು’ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.