ADVERTISEMENT

ಡ್ರಾ ಪಂದ್ಯದಲ್ಲಿ ಆನಂದ್

ಪಿಟಿಐ
Published 17 ಜೂನ್ 2017, 19:30 IST
Last Updated 17 ಜೂನ್ 2017, 19:30 IST
ವಿಶ್ವನಾಥನ್‌ ಆನಂದ್‌
ವಿಶ್ವನಾಥನ್‌ ಆನಂದ್‌   

ಸ್ಟಾವಂಗರ್‌: ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್‌ ಅಲ್ಟಿಬಾಕ್ಸ್‌ ನಾರ್ವೆ ಚೆಸ್ ಟೂರ್ನಿಯಲ್ಲಿ ಶನಿವಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಎದುರು ಡ್ರಾ ಮಾಡಿಕೊಂಡಿದ್ದಾರೆ.

ಅಂತಿಮ ಹಾಗೂ ಒಂಬತ್ತನೇ ಸುತ್ತಿನ ಪಂದ್ಯದಲ್ಲಿ ಆನಂದ್ ಅವರು ಕಾರ್ಲ್‌ಸನ್ ಎದುರು ಪಾಯಿಂಟ್ಸ್ ಹಂಚಿಕೊಂಡರು. ಇಬ್ಬರು ಆಟಗಾರರು ನಾಲ್ಕು ಪಾಯಿಂಟ್ಸ್‌ಗಳಿಂದ ಏಳನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಅಂತಿಮ ಪಂದ್ಯದಲ್ಲಿ ಆನಂದ್ ಕೆಲವು ಬದಲಾವಣೆಗಳೊಂದಿಗೆ ಆಡಿದರು. ಇದರಿಂದಾಗಿ ಅವರು ಡ್ರಾ ಸಾಧಿಸಲು ಸಾಧ್ಯವಾಯಿತು.

ಟೂರ್ನಿಯಲ್ಲಿ ಆರಂಭದ ನಾಲ್ಕು ಪಂದ್ಯಗಳಲ್ಲಿ ಸತತವಾಗಿ ಸೋಲು ಕಂಡಿದ್ದ ಆನಂದ್ ಅಮೆರಿಕದ ಫ್ಯಾಬಿಯಾನೊ ಕರುವಾನ ಎದುರು ಏಕೈಕ ಗೆಲುವು ದಾಖಲಿಸಿದ್ದರು. ಬಳಿಕ ನಾಲ್ಕು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರು.

ಅರ್ಮೇನಿಯಾದ ಲೆವೊನ್ ಅರೊನಿಯನ್ ಚಾಂಪಿಯನ್ ಆಗಿದ್ದಾರೆ. ಅಂತಿಮ ಪಂದ್ಯದಲ್ಲಿ ಅವರು ಅಮೆರಿಕದ ವೆಸ್ಲೆ ಸೊ ಎದುರು ಡ್ರಾ ಮಾಡಿಕೊಂಡರು.
ಒಂಬತ್ತು ಪಾಯಿಂಟ್ಸ್‌ಗಳಲ್ಲಿ ಅರ್ಮೇನಿಯಾದ ಆಟಗಾರ ಒಟ್ಟು ಆರು ಪಾಯಿಂಟ್ಸ್ ಕಲೆಹಾಕಿದ್ದರು. ಎರಡನೇ ಸ್ಥಾನವನ್ನು ಐದು ಪಾಯಿಂಟ್ಸ್‌ಗಳಿಂದ ಅಮೆರಿಕಾದ ಹಿಕಾರು ನಕಮುರಾ ಹಾಗೂ ರಷ್ಯಾದ ವ್ಲಾದಿಮಿರ್ ಕ್ರಾಮನಿಕ್ ಹಂಚಿಕೊಂಡರು.

‘ಟೂರ್ನಿಯ ಆರಂಭದ ಸೋಲಿನಿಂದ ಗೆಲುವು ಸಾಧ್ಯವಾಗಲಿಲ್ಲ. ಕೊನೆಯ ಐದು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದೆ’ ಎಂದು ಆನಂದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.