ADVERTISEMENT

ತಂಪು ವಾತಾವರಣದಲ್ಲಿ ಮಾತಿನ ಕಿಡಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 19:59 IST
Last Updated 18 ಡಿಸೆಂಬರ್ 2012, 19:59 IST

ಮೈಸೂರು: ಮಂಗಳವಾರ ತುಸು ತಂಪಾಗಿದ್ದ ವಾತಾವರಣದಲ್ಲಿ ಗಂಗೋತ್ರಿ ಗ್ಲೇಡ್ಸ್ ಅಂಗಳದಲ್ಲಿ ಕರ್ನಾಟಕ ಮತ್ತು ವಿದರ್ಭ ತಂಡಗಳ ಆಟಗಾರರ ನಡುವೆ ಒಂದೆರಡು ಬಾರಿ ಮಾತಿನ ಕಿಡಿಗಳು ಹಾರಿದವು.

ಮೊದಲ ಇನಿಂಗ್ಸ್‌ನ ಬ್ಯಾಟಿಂಗ್ ಮಾಡುತ್ತಿದ್ದ ವಿದರ್ಭ ತಂಡದ ಕೊನೆಯ ಬ್ಯಾಟ್ಸ್‌ಮನ್ ರವಿ ಠಾಕೂರ್ ಮತ್ತು ಕರ್ನಾಟಕದ ವಿಕೆಟ್ ಕೀಪರ್ ಸಿ.ಎಂ. ಗೌತಮ್ ನಡುವೆ ಸಣ್ಣದಾಗಿ ಮಾತಿನ ಚಕಮಕಿ ನಡೆಯಿತು. ನಂತರ ಅಂಪೈರ್ ಸುರೇಶ್ ಶಾಸ್ತ್ರಿ ಮತ್ತು ಬಿ.ಎಸ್. ಪಾಠಕ್ ಅವರ ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆ ಹರಿಯಿತು.

ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕರ್ನಾಟಕದ ರಾಬಿನ್ ಉತ್ತಪ್ಪ ವಾಘ್‌ಗೆ ಎಲ್‌ಬಿಡಬ್ಲ್ಯುಗೆ ಬಲೆಗೆ ಬಿದ್ದರು. ಅಂಪೈರ್ ನಿರ್ಣಯ ನೀಡುವಲ್ಲಿ ಸ್ವಲ್ಪ ತಡೆದು ನಂತರ ಕೈಎತ್ತಿದರು. ಪೆವಿಲಿಯನ್‌ನತ್ತ ಹೊರಟ ರಾಬಿನ್‌ನತ್ತ ಕಿಚಾಯಿಸುವ ಮಾತುಗಳು ತೂರಿಬಂದವು. ಅದಕ್ಕೆ ರಾಬಿನ್ ತಿರುಗಿ ಉತ್ತರ ಕೊಟ್ಟರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು. ಆಗಲೂ ಅಂಪೈರ್‌ಗಳು ಎಚ್ಚರಿಕೆ ನೀಡಿ ಸಮಸ್ಯೆ ಬಗೆಹರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.