ADVERTISEMENT

ತಮೀಮ್ ಇಕ್ಬಾಲ್ ಶತಕ: ಇಂಗ್ಲೆಂಡ್‌ಗೆ 306ರನ್‌ ಟಾರ್ಗೆಟ್‌ ನೀಡಿದ ಬಾಂಗ್ಲಾ

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 13:24 IST
Last Updated 1 ಜೂನ್ 2017, 13:24 IST
ತಮೀಮ್ ಇಕ್ಬಾಲ್ ಆಟದ ವೈಖರಿ.
ತಮೀಮ್ ಇಕ್ಬಾಲ್ ಆಟದ ವೈಖರಿ.   

ಲಂಡನ್‌: ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಬಾಂಗ್ಲಾದೇಶದ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.

ಬಾಂಗ್ಲಾದೇಶ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 305 ರನ್ ಗಳಿಸಿದೆ.

ಬಾಂಗ್ಲಾದೇಶದ ಪರ: ತಮೀಮ್ ಇಕ್ಬಾಲ್ 128, ಸೌಮ್ಯ ಸರ್ಕಾರ್ 28, ಇಮ್ರುಲ್ ಕಾಯೆಸ್ 19,  ಶಬ್ಬೀರ್ ರೆಹಮಾನ್ 24 , ಮುಷ್ಫಿಕರ್ ರಹೀಮ್ 78,  ಶಕೀಬ್ ಅಲ್ ಹಸನ್ 10, ಮಹಮ­ದುಲ್ಲಾ ಬ್ಯಾಟಿಂಗ್‌ 06, ಮೊಸಾ­ದೇಕ್ ಹುಸೇನ್ ಬ್ಯಾಟಿಂಗ್‌ 02 ರನ್‌ ಗಳಿಸಿದ್ದಾರೆ.

ಇಂಗ್ಲೆಂಡ್ ಪರ: ಲಿಯಾಮ್ ಪ್ಲಂಕೆಟ್ 4, ಜೇಕ್ ಬಾಲ್ 1, ಬೆನ್ ಸ್ಟೋಕ್ಸ್‌ 1 ವಿಕೆಟ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.