ADVERTISEMENT

ತಿವಾರಿ ಪಡೆಗೆ ರೋಚಕ ಜಯ

ವಿಜಯ ಹಜಾರೆ: ಸೆಮಿಫೈನಲ್‌ನಲ್ಲಿ ಕರ್ನಾಟಕ–ಜಾರ್ಖಂಡ್‌ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 20:04 IST
Last Updated 12 ಮಾರ್ಚ್ 2014, 20:04 IST

ಕೋಲ್ಕತ್ತ (ಪಿಟಿಐ):  ರಣಜಿ ಚಾಂಪಿಯನ್ ಕರ್ನಾಟಕ ತಂಡ ವಿಜಯ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಶುಕ್ರವಾರ ಜಾರ್ಖಂಡ್‌ ಎದುರು ಪೈಪೋಟಿ ನಡೆಸಲಿದೆ. ಜಾಧವ್‌ಪುರ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೌರಭ್‌ ತಿವಾರಿ ಸಾರಥ್ಯದ ಜಾರ್ಖಂಡ್‌್ ತಂಡ ಸರ್ವೀಸಸ್‌ ಎದುರು 25 ರನ್‌ಗಳ ರೋಚಕ ಗೆಲುವು ಪಡೆದು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತು.

ಟಾಸ್‌ ಸೋತರೂ ಮೊದಲು ಬ್ಯಾಟ್‌್ ಮಾಡುವ ಅವಕಾಶ ಪಡೆದ ಜಾರ್ಖಂಡ್‌ 48.2 ಓವರ್‌ಗಳಲ್ಲಿ 214 ರನ್‌ ಗಳಿಸಿ ಆಲ್‌ಔಟ್‌ ಆಯಿತು. ಆದರೆ, ಈ ಅಲ್ಪ ಮೊತ್ತವೇ ಸರ್ವೀಸಸ್‌ ಗೆ ಭಾರಿ ಸವಾಲು ಎನಿಸಿತು. ರಾಹುಲ್‌ ಶುಕ್ಲಾ (61ಕ್ಕೆ5) ದಾಳಿ ಯನ್ನು ಎದುರಿಸಲು ಪರದಾಡಿದ ಯಶ್‌ ಪಾಲ್‌ ಸಿಂಗ್‌ ನೇತೃತ್ವದ ಸರ್ವೀಸಸ್‌್ 189 ರನ್‌ ಕಲೆ ಹಾಕಿ ತನ್ನ ಹೋರಾಟ ಅಂತ್ಯಗೊಳಿಸಿತು.

ರೈಲ್ವೇಸ್‌ಗೆ ಜಯ: ಈಡನ್ ಗಾರ್ಡನ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಇನ್ನೊಂದು ಕ್ವಾರ್ಟರ್‌ ಫೈನಲ್‌ ಪಂದ್ಯ ದಲ್ಲಿ ರೈಲ್ವೇಸ್‌  ತಂಡ ಪಂಜಾಬ್‌ ಎದುರು 137 ರನ್‌ಗಳ ಅಮೋಘ ಜಯ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿ ರೈಲ್ವೇಸ್‌ 47.5 ಓವರ್‌ಗಳಲ್ಲಿ 242 ರನ್‌ ಗಳಿಸಿತು. ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಪಂಜಾಬ್‌ 105 ರನ್‌ಗೆ ಸರ್ವಪತನ ಕಂಡಿತು.

ಸಂಕ್ಷಿಪ್ತ ಸ್ಕೋರು: ಜಾರ್ಖಂಡ್‌್ 48.2 ಓವರ್‌ಗಳಲ್ಲಿ 214 (ವಿರಾಟ್‌ ಸಿಂಗ್‌ 11, ಕುಮಾರ್‌ ದೇಬವೃತ 84, ಕೇಶವ ಕುಮಾರ್‌ 41, ರಾಹುಲ್‌ ಶುಕ್ಲಾ ಔಟಾಗದೆ 32, ವರುನ್‌ ಆ್ಯರನ್‌ 10; ಸೂರಜ್‌ ಯಾದವ್‌ 36ಕ್ಕೆ4, ಶಬಾಬ್‌ ನಾಜರ್‌ 53ಕ್ಕೆ4, ಸುಮಿತ್‌ ಸಿಂಗ್‌ 27ಕ್ಕೆ1). ಸರ್ವೀಸಸ್ 48.4 ಓವರ್‌ಗಳಲ್ಲಿ 189 (ಯಶಪಾಲ್‌ ಸಿಂಗ್‌ 39, ಸೌಮ್ಯ ರಂಜನ್‌ ಸ್ವಾನ್‌ 45, ಸೂರಜ್‌ ಯಾದವ್‌ 28; ರಾಹುಲ್‌ ಶುಕ್ಲಾ 61ಕ್ಕೆ5, ಜಸ್‌ಕರಣ್‌ ಸಿಂಗ್‌ 22ಕ್ಕೆ2, ಆಶಿಶ್‌ ಯಾದವ್‌ 11ಕ್ಕೆ1).

ಫಲಿತಾಂಶ: ಜಾರ್ಖಂಡ್‌ಗೆ 25 ರನ್‌ ಗೆಲುವು ಹಾಗೂ ಸೆಮಿಫೈನಲ್‌ ಪ್ರವೇಶ. ಪಂದ್ಯ ಶ್ರೇಷ್ಠ: ರಾಹುಲ್‌ ಶುಕ್ಲಾ.
ರೈಲ್ವೇಸ್‌ 47.5 ಓವರ್‌ಗಳಲ್ಲಿ 242. (ಶಿವಕಾಂತ್‌ ಶುಕ್ಲಾ 16, ಮಹೇಶ್‌ ರಾವತ್‌ 108; ಸಂದೀಪ್ ಶರ್ಮ 48ಕ್ಕೆ2, ಸಿದ್ದಾರ್ಥ್‌ ಕೌಲ್‌ 47ಕ್ಕೆ5, ಮನ್‌ಪ್ರೀತ್ ಗೋನಿ 43ಕ್ಕೆ2). ಪಂಜಾಬ್‌ 33.4 ಓವರ್‌ಗಳಲ್ಲಿ 105. (ಗಿತಾನ್ಶ್‌ ಖೇರಾ 23, ಯುವರಾಜ್‌ ಸಿಂಗ್‌ 15, ಗುರುಕೀರತ್‌ ಸಿಂಗ್‌ 18, ತರುವಾರ್‌ ಕೊಹ್ಲಿ ಔಟಾಗದೆ 27, ಹರಭಜನ್‌ ಸಿಂಗ್‌ 11; ಅನುರೀತ್‌ ಸಿಂಗ್‌ 26ಕ್ಕೆ2, ಕೃಷ್ಣಕಾಂತ್‌ ಉಪಾ ಧ್ಯಾಯ 14ಕ್ಕೆ2, ಆಶಿಶ್‌ ಯಾದವ್‌ 12ಕ್ಕೆ3).

ಫಲಿತಾಂಶ: ರೈಲ್ವೇಸ್‌ಗೆ 137 ರನ್‌ ಜಯ ಮತ್ತು ಸೆಮಿಫೈನಲ್‌ ಪ್ರವೇಶ. ಪಂದ್ಯ ಶ್ರೇಷ್ಠ: ಮಹೇಶ್‌ ರಾವತ್‌.

ಸೆಮಿ ವೇಳಾಪಟ್ಟಿ
*ಕರ್ನಾಟಕ–ಜಾರ್ಖಂಡ್‌
*ಬಂಗಾಳ–ರೈಲ್ವೇಸ್‌
*ಪಂದ್ಯ: ಮಾರ್ಚ್‌ 14

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT