ಹರಿಯಾಣ: ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಸೀನಿಯರ್ ಥ್ರೋಬಾಲ್ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಜಯ ಗಳಿಸಿದ್ದಾರೆ.
ಪಾಣಿಪತ್ ಶಿವಾಜಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕರ್ನಾಟಕ 2-0ರಲ್ಲಿ (25-10, 25-4) ಉತ್ತರ ಪ್ರದೇಶ ತಂಡವನ್ನು ಮಣಿಸಿತು. ಎರಡೂ ಸೆಟ್‌ಗಳಲ್ಲಿ ಕರ್ನಾಟಕ ತಂಡದವರು ಪಾರಮ್ಯ ಮೆರೆದರು.
ಕರ್ನಾಟಕ ತಂಡ `ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿರುವ ಮತ್ತೊಂದು ತಂಡ ಉತ್ತರಾಂಚಲ. ಇನ್ನುಳಿದ ಪಂದ್ಯಗಳಲ್ಲಿ ಮಧ್ಯಪ್ರದೇಶ 2-0ರಲ್ಲಿ ಚಂಡೀಗಡ ಎದುರೂ, ಛತ್ತೀಸ್‌ಗಡ 2-0ರಲ್ಲಿ ಗುಜರಾತ್ ಮೇಲೂ, ಗೋವಾ ತಂಡ 2-0ರಲ್ಲಿ ಜಾರ್ಖಂಡ್ ವಿರುದ್ಧವೂ, ರಾಜಸ್ತಾನ 2-0ರಲ್ಲಿ ಆಂಧ್ರಪ್ರದೇಶ ಎದುರೂ, ತಮಿಳುನಾಡು 2-0ರಲ್ಲಿ ಬಿಹಾರ ವಿರುದ್ಧವೂ ಗೆಲುವು ಸಾಧಿಸಿದವು.
ಪುರುಷರ ವಿಭಾಗದಲ್ಲಿ ದೆಹಲಿ ತಂಡ 2-0ರಲ್ಲಿ ವಿದರ್ಭ ಎದುರೂ, ಅಸ್ಸಾಂ 2-0ರಲ್ಲಿ ದಿಯು ದಾಮನ್ ವಿರುದ್ಧವೂ ಜಯ ಗಳಿಸಿದವು. ಕರ್ನಾಟಕ ತಂಡ `ಡಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಎನ್‌ಟಿಸಿ ದೆಹಲಿ ಹಾಗೂ ಪುದುಚೇರಿ ತಂಡಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.