ADVERTISEMENT

ಥ್ರೋಬಾಲ್: ಭಾರತ ತಂಡದಲ್ಲಿ ಕರ್ನಾಟಕದ ಏಳು ಮಂದಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 9:45 IST
Last Updated 14 ಜನವರಿ 2011, 9:45 IST

ಬೆಂಗಳೂರು: ದುಬೈನಲ್ಲಿ ಜನವರಿ 14 ರಿಂದ 16ರ ವರೆಗೆ ನಡೆಯಲಿರುವ ಪ್ರಥಮ ಜೂನಿಯರ್ ವಿಶ್ವಕಪ್ ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಒಟ್ಟು ಏಳು ಮಂದಿ ಕರ್ನಾಟಕದ ಆಟಗಾರರು ಇದ್ದಾರೆ. ಭಾರತ ಥ್ರೋಬಾಲ್ ಫೆಡರೇಷನ್ ಗುರುವಾರ ಭಾರತ ತಂಡಗಳಿಗೆ ಆಯ್ಕೆ ಮಾಡಲಾದ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿತು. ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಪ್ರಿಯಾಂಕ ಬದರಿನಾಥ್ ಅವರು ತಂಡದ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಬಾಲಕರ ವಿಭಾಗದಲ್ಲಿ ಪೂರ್ಣಚಂದ್ರ, ಪ್ರವೀಣ್ ಗೌಡ, ರಾಜೇಶ್, ಸಂತೋಷ್, ಸುಹಾಸ್, ನಾಗೇಶ್ ಖದ್ರಿ ಅವರು ಕರ್ನಾಟಕದಿಂದ ಆಯ್ಕೆ ಆಗಿದ್ದಾರೆ.

ತಂಡಗಳು ಇಂತಿವೆ.

ಬಾಲಕರ ವಿಭಾಗ: ಶರವಣ ಕುಮಾರ್ (ನಾಯಕ), ಪೂರ್ಣಚಂದ್ರ, ಪ್ರವೀಣ್ ಗೌಡ, ರಾಜೇಶ್, ಸಂತೋಷ್, ಸುಹಾಸ್, ಅಶೋಕ, ಕಿಶೋರ್, ನಾಗೇಶ್ ಖದ್ರಿ, ದಿವ್ಯಾಂಗ್ ರಹೇಜಾ, ಕೆ. ಸೌರಭ್ ಹಾಗೂ ಶುಭಂ. ಕೋಚ್: ಎಂ.ವಿ. ಸತ್ಯನಾರಾಯಣ, ಮ್ಯಾನೇಜರ್: ವೆಲ್ಲಿಂಗ್ಟನ್ ಜೋಸೆಫ್.

ಬಾಲಕಿಯರ ವಿಭಾಗ: ಪ್ರಿಯಾಂಕ ಬದರಿನಾಥ್ (ನಾಯಕಿ), ಗಗನ್‌ದೀಪ್, ಮನು, ಆರ್. ನಿಶಾ, ಪೂಜಾ, ನಿರ್ನಾಲಾ, ರೋಹಿಣಿ, ಶಾಲಿನಿ, ಸ್ನೇಹ್ ಬನ್ಸಾಲ್, ಸೋನಿಯಾ, ವೃಂದಾ ಹಾಗೂ ಶ್ರುತಿ. ಕೋಚ್: ಗೋವಿಂದರಾಜ್, ಮ್ಯಾನೇಜರ್: ನರೇಶ್ ದೆಸ್ವಾಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.